Chandan Shetty: ರ್ಯಾಪರ್ ಸಿಂಗರ್ ಚಂದನ್‌ಶೆಟ್ಟಿಯ ಹೊಸ ಹಾಡು ʼಕಾಟನ್ ಕ್ಯಾಂಡಿʼ ವಿವಾದದಲ್ಲಿ ಸಿಲುಕಿದೆ. ಟ್ಯೂನ್ ಕದಿಯಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಚಂದನ್ ಶೆಟ್ಟಿ ವಿರುದ್ಧ ಕೃತಿಚೌರ್ಯದ ಆರೋಪವನ್ನು ಯುವರಾಜ್ ವೈಬುಲ್ ಆರೋಪ ಮಾಡಿದ್ದಾರೆ. ನಾನು ಆರು ವರ್ಷದ ಹಿಂದೆಯೇ ಮಾಡಿದ ಟ್ಯೂನನ್ನು ಕದ್ದಿದ್ದಾರೆ ಎಂದು ಹೇಳಿದ್ದಾರೆ.
ಹೊಸ ವರ್ಷಕ್ಕೆ ರಿಲೀಸ್ ಆದ ಚಂದನ್ ಶೆಟ್ಟಿಯ ಕಾಟನ್ ಕ್ಯಾಂಡಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಈ ಹಾಡಿಗೆ ಕಾಪಿರೈಟ್ ಕೇಸ್ ಹಾಕುವೆ ಎಂದು ಯುವರಾಜ್ ವೈಬುಲ್ ಹೇಳಿದ್ದಾರೆ.
ಆದರೆ ಚಂದನ್ ಶೆಟ್ಟಿ ಅವರು ನಾನು ಈ ರೀತಿ ಮಾಡಿಲ್ಲ. ಕಷ್ಟಪಟ್ಟು ಟ್ಯೂನ್ ಮಾಡಿದ್ದೇನೆ. ಯಾವುದೇ ಟ್ಯೂನ್ ಕಾಪಿ ಮಾಡಿಲ್ಲ. ಅವರು ಕೇಸು ಹಾಕುವುದಾದರೆ ನಾನು ಕೂಡಾ ದಾಖಲೆಗಳನ್ನು ಇಟ್ಟುಕೊಂಡು ನ್ಯಾಯಾಂಗ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
