ಕೊರೋನ ಬಂದ ಮೇಲಂತು ಎಲ್ಲೆಡೆ ಕೊರೋನ ಕೊರೋನ ಕೇಳೋ ರೀತಿಯಾಗಿದೆ. ಮುಂಜಾಗೃತ ಕ್ರಮ ಕೈ ಗೊಳ್ಳಲು ಸರ್ಕಾರ ಮೊಬೈಲ್ ಫೋನ್ ಕರೆಗಳಲ್ಲೂ ಇದೇ ಆಡಿಯೋ ಮೊದಲು ಪ್ರಸಾರ ಆಗುವಂತೆ ತಿಳಿಸಿತ್ತು. ಅದು ಎಷ್ಟರ ಮಟ್ಟಿಗೆ ಜನರಿಗೆ ಕಿರಿ-ಕಿರಿ ಉಂಟು ಮಾಡಿತ್ತುಯೆಂದರೆ ಎಮರ್ಜೆನ್ಸಿ ಕಾಲ್ ಮಾಡಲು ವ್ಯಥೆ ಪಡುವಂತಹ ಪರಿಸ್ಥಿತಿ. ಇದೀಗ ಇದರಿಂದ ಬೇಸತ್ತ ಜನರಿಗೆ ಸಿಹಿಸುದ್ದಿ!!
ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಈ ನಿಯಮವನ್ನು ಕೇಂದ್ರ ಸರ್ಕಾರ ಕೈ ಬಿಡುವ ಸಾಧ್ಯತೆಯಿದೆ. ಕರೆ ಮಾಡಿದಾಗ ಫೋನ್ ರಿಂಗಣಿಸುವ ಬದಲು ಕೆಮ್ಮುತ್ತಿರುವ ಶಬ್ಧ,ಕೊರೋನ ವೈರಸ್ ಸೋಂಕಿನ ಬಗ್ಗೆ ಸಂದೇಶ,ಕೊರೋನಾ ಲಸಿಕೆಯ ಬಗ್ಗೆಯೂ ಕೂಡ ಜಾಗೃತಿ ಕರೆ ಆಡಿಯೋ ಪ್ಲೇ ಆಗುತ್ತಿದೆ.ಜಿಯೋ, ವೊಡಾಫೋನ್, ಏರ್‌ಟೆಲ್ ಅಥವಾ ಇತರ ಯಾವುದೇ ಟೆಲಿಕಾಂ ಕಂಪನಿಯಿಂದ ಸಿಮ್ ಕಾರ್ಡ್ ಅನ್ನು ಬಳಸುವ ಗ್ರಾಹಕರೆಲ್ಲರಿಗೂ ಈ ಸಂದೇಶ ರವಾನಿಸುತಿತ್ತು.
ಇದೀಗ ತುರ್ತು ಸಂದರ್ಭಗಳಲ್ಲಿ ನಿರ್ಣಾಯಕ ಕರೆಗಳನ್ನು ವಿಳಂಬಗೊಳಿಸುತ್ತಿವೆ ಎಂಬ ದೂರು ಕೇಳಿ ಬಂದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ದೂರಸಂಪರ್ಕ ಇಲಾಖೆಯು ಈ ಪೂರ್ವ ಕರೆ ಪ್ರಕಟಣೆಗಳು ಮತ್ತು ಕಾಲರ್ ಟ್ಯೂನ್‌ಗಳನ್ನು ಕೈಬಿಡುವಂತೆ” ಗ್ರಾಹಕರು ತುರ್ತು ಕರೆಗಳನ್ನು ಮಾಡಬೇಕಾದಾಗ ಅಡಚಣೆಯಾಗಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸಲು ಅನೇಕರು ದೂರು ಸಲ್ಲಿಸಿದ್ದಾರೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ವರದಿ ತಿಳಿಸಿದೆ.
