Home » ಮಂಗಳೂರು : ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ಲಾಡ್ಜ್‌ನಲ್ಲಿ ಪತ್ತೆ !

ಮಂಗಳೂರು : ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ಲಾಡ್ಜ್‌ನಲ್ಲಿ ಪತ್ತೆ !

0 comments

ಮಂಗಳೂರು : ದಂಪತಿಗಳಿಬ್ಬರು ಲಾಡ್ಜ್‌ವೊಂದರಲ್ಲಿ ರೂಂ ಮಾಡಿದ್ದು ಅನಂತರ ಅಲ್ಲೇ ನೇಣಿಗೆ ಶರಣಾಗಿರುವ ರೀತಿಯಲ್ಲಿ ಘಟನೆಯೊಂದು ನಡೆದಿದೆ. ನಗರದ ಫಳ್ನೀರ್‌ ಬಳಿಯ ಲಾಡ್ಜ್‌ವೊಂದರಲ್ಲಿ ಈ ಪ್ರಕರಣ ನಡೆದಿದೆ. ದಂಪತಿಯ ಮೃತದೇಹವು ಎರಡು ದಿನಗಳ ಬಳಿಕ ರೂಮ್ ನಲ್ಲೇ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.

ಮೃತ ದಂಪತಿಯನ್ನು ಕೇರಳ ಮೂಲದ ರವೀಂದ್ರ ಹಾಗೂ ಸುಧಾ ಎಂದು ಗುರುತಿಸಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ನ್ಯೂ ಬ್ಲೂ ಸ್ಟಾರ್ ಎಂಬ ಲಾಡ್ಜ್ ನಲ್ಲಿ ದಂಪತಿ ರೂಮ್ ಪಡೆದಿದ್ದರು.

ಮಾಹಿತಿಯ ಪ್ರಕಾರ, ರೂಮ್ ಪಡೆದ ಬಳಿಕ ದಂಪತಿಗಳು ರೂಮ್ ನಿಂದ ಹೊರಗೆ ಬಾರದ ಕಾರಣ, ಎರಡು ದಿನಗಳ ಬಳಿಕ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿಗಳು ಬಾಗಿಲು ಒಡೆದು ಪರಿಶೀಲಿಸಿದಾಗ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ತನಿಖೆ ಮುಂದುವರಿದಿದೆ.

You may also like

Leave a Comment