Home » Shivamogga: ತಂತಿಯ ಮೇಲೆ ಬಟ್ಟೆ ಒಣಗಿಸಲು ಹಾಕಿದಾಗ ವಿದ್ಯುತ್‌ ಅವಘಡ: ದಂಪತಿ ಸ್ಥಳದಲ್ಲೇ ಸಾವು

Shivamogga: ತಂತಿಯ ಮೇಲೆ ಬಟ್ಟೆ ಒಣಗಿಸಲು ಹಾಕಿದಾಗ ವಿದ್ಯುತ್‌ ಅವಘಡ: ದಂಪತಿ ಸ್ಥಳದಲ್ಲೇ ಸಾವು

by Mallika
0 comments

Shivamogga: ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ವಿದ್ಯುತ್‌ ಸ್ಪರ್ಶಿಸಿ ದಂಪತಿ ಸಾವಿಗೀಡಾದ ಘಟನೆ ಗುರುವಾರ ಸಂಜೆ ನಡೆದಿದೆ. ವಿದ್ಯುತ್‌ ಸ್ಪರ್ಶಿಸಿ ಪತ್ನಿ ಒದ್ದಾಡುವುದನ್ನು ನೋಡಿದ ಪತಿ ರಕ್ಷಣೆ ಮಾಡಲು ಮುಂದಾಗಿದ್ದು, ಇಬ್ಬರೂ ವಿದ್ಯುತ್‌ ಶಾಕ್‌ನಿಂದ ಸಾವಿಗೀಡಾಗಿದ್ದಾರೆ.

ಕಪಗಳಲೆ ಗ್ರಾಮದ ಕೃಷ್ಣಪ್ಪ (55), ಪತ್ನಿ ವಿನೋದ (42) ಮೃತಪಟ್ಟವರು.

ಮನೆಯ ಹೊರಗೆ ಬಟ್ಟೆ ಒಣಗಿಸಲು ಕಟ್ಟಿದ ಕಬ್ಬಿಣದ ತಂತಿಯ ಮೇಲೆ ಬಟ್ಟೆ ಹಾಕಲೆಂದು ಹೋದಾಗ ತಂತಿಯಲ್ಲಿ ವಿದ್ಯುತ್‌ ಪ್ರವಹಿಸಿ ವಿನೋದಾ ಅವರಿಗೆ ಶಾಕ್‌ ಹೊಡೆದಿದೆ. ಈ ಸಂದರ್ಭ ಅವರನ್ನು ರಕ್ಷಿಸಲೆಂದು ಹೋದ ಕೃಷ್ಣಪ್ಪ ಅವರಿಗೂ ಶಾಕ್‌ ಹೊಡೆದು ಸ್ಥಳದಲ್ಲಿಯೇ ಮೃತ ಹೊಂದಿದ್ದಾರೆ.

ಸೊರಬ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Moodabidre: ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆ ಮುಖಂಡನ ಬಂಧನ, ಅಪಘಾತ ಸಂದರ್ಭ ಬೆದರಿಸಿ 5 ಲಕ್ಷ ರೂ. ಪರಿಹಾರ ಕೊಡಿಸಿದ ಆರೋಪ

You may also like