Home » Viral video: ರೈಲಿನಲ್ಲಿ ಓಪನ್ ಆಗಿ ಜೋಡಿಗಳ ರಸಲೀಲೆ- ಪ್ರಯಾಣಿಕರಿಂದ ಬಿತ್ತು ಗೂಸಾ, ವಿಡಿಯೋ ವೈರಲ್!!

Viral video: ರೈಲಿನಲ್ಲಿ ಓಪನ್ ಆಗಿ ಜೋಡಿಗಳ ರಸಲೀಲೆ- ಪ್ರಯಾಣಿಕರಿಂದ ಬಿತ್ತು ಗೂಸಾ, ವಿಡಿಯೋ ವೈರಲ್!!

0 comments

Viral Video : ಇಂದಿನ ಯುವ ಜನತೆಗೆ ನಾವು ಯಾವ ಸ್ಥಳದಲ್ಲಿ ಇದ್ದೇವೆ ಎಂಬುದನ್ನು ಮೈ ಮರೆತು, ಬೇಕಾಬಿಟ್ಟಿ ವರ್ತಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಾವು ಹೇಗಿರಬೇಕು? ತಮ್ಮನ್ನು ಇತರರು ಗಮನಿಸುತ್ತಾರೆ ಎಂಬ ಸಾಮಾನ್ಯ ಪ್ರಜ್ಞೆಯು ಅವರಿಗೆ ಇರುವುದಿಲ್ಲ. ಇದೀಗ ಇಂಥದ್ದೇ ಒಂದು ಘಟನೆ ನಡೆದಿದ್ದು ಚಲಿಸುತ್ತಿರುವ ರೈಲಿನ ಅಪ್ಪರ್ ಬರ್ತ್ ನಲ್ಲಿ ಜೋಡಿಗಳು ರೋಮ್ಯಾನ್ಸ್ ಮಾಡುತ್ತಿದ್ದು, ಅವರಿಗೆ ಪ್ರಯಾಣಿಕರು ಗೂಸಾ ನೀಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಜಲ್ ಮಿಶ್ರಾ ಎಂಬವರು ಎಕ್ಸ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ ಸುಮಾರು 25-27 ವರ್ಷ ವಯಸ್ಸಿನ ಜೋಡಿಯೊಂದು ಒಂದೇ ಸೀಟಿನಲ್ಲಿ ಹೊದಿಕೆಯಡಿ ಮಲಗಿರುವುದು ಕಂಡುಬಂದಿದೆ. ಇದನ್ನು ಕಂಡ ರೈಲಿನಲ್ಲಿದ್ದ ಪ್ರಯಾಣಿಕರು ಕೋಪಗೊಂಡಿದ್ದಾರೆ. ಆದರೆ ಅವರು ಅದನ್ನು ಕೇಳದೆ ತಮ್ಮ ಸರಸ ಸಲ್ಲಾಪವನ್ನು ಮುಂದುವರೆಸಿದ್ದಾರೆ. ಈ ವೇಳೆ ಕೋಪಗೊಂಡ ಪ್ರಯಾಣಿಕರು ಅವರಿಗೆ ಗೂಸ ನೀಡಿದ್ದಾರೆ. ರೈಲುಗಳಂತಹ ಸಾರ್ವಜನಿಕ ಸ್ಥಳಗಳಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

You may also like