Viral Video : ಇಂದಿನ ಯುವ ಜನತೆಗೆ ನಾವು ಯಾವ ಸ್ಥಳದಲ್ಲಿ ಇದ್ದೇವೆ ಎಂಬುದನ್ನು ಮೈ ಮರೆತು, ಬೇಕಾಬಿಟ್ಟಿ ವರ್ತಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಾವು ಹೇಗಿರಬೇಕು? ತಮ್ಮನ್ನು ಇತರರು ಗಮನಿಸುತ್ತಾರೆ ಎಂಬ ಸಾಮಾನ್ಯ ಪ್ರಜ್ಞೆಯು ಅವರಿಗೆ ಇರುವುದಿಲ್ಲ. ಇದೀಗ ಇಂಥದ್ದೇ ಒಂದು ಘಟನೆ ನಡೆದಿದ್ದು ರೈಲಿನಲ್ಲಿ ಒಂದು ಜೋಡಿ ಎಲ್ಲರಿಗೂ ಕಾಣುವಂತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ವೈರಲಾಗಿದೆ.
OYO Train
ऐसे लोगों ने अब टट्रैन को भी oyo बना दिया ♀️♀️ pic.twitter.com/ZZCZ3nADdj
— दिव्या कुमारी (@divyakumaari) September 6, 2025
ಹೌದು, ಇಲ್ಲೊಂದು ಜೋಡಿ ಪ್ರಯಾಣಿಕರಿಗೆ ಮುಜುಗರವಾಗುವಂತೆ ವರ್ತಿಸಿದೆ. ರೈಲಿನಲ್ಲಿ (Train) ಜೋಡಿಯೊಂದು ಅಪ್ಪಿಕೊಂಡು ಮುದ್ದಾಡಿದ್ದು, ಈ ವರ್ತನೆಯೂ ಪ್ರಯಾಣಿಕರಿಗೆ ಮುಜುಗರ ತರಿಸಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. @divyakuamari ಹೆಸರಿನ ಎಕ್ಸ್ ಖಾತೆಯಲ್ಲಿ ಜೋಡಿಯ ರೊಮ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವ ಯುವಕ ಯುವತಿಯನ್ನು ಕಾಣಬಹುದು. ಸುತ್ತಲೂ ಜನರಿದ್ದರೂ ಈ ಜೋಡಿಯೊಂದು ಸೈಡ್ ಲೋವರ್ ಬರ್ತ್ ಸೀಟ್‌ನಲ್ಲಿ ಮಲಗಿಕೊಂಡು ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುತ್ತನ್ನಿಕ್ಕುತ್ತಾ ರೊಮ್ಯಾನ್ಸ್ ಮಾಡುತ್ತಾ ಮೈ ಮರೆತಿದೆ. ಈ ಜೋಡಿಯ ಸರಸ ಸಲ್ಲಾಪವನ್ನು ಮೇಲಿನ ಬರ್ತ್ ಸೀಟ್‌ನಲ್ಲಿರುವ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:Technology: ಗುಡ್ ನ್ಯೂಸ್ : ಟಿವಿ,ಎಸಿ, ವಾಷಿಂಗ್ ಮೆಷಿನ್ ಬೆಲೆಯಲ್ಲಿ ಭಾರೀ ಇಳಿಕೆ!
