ನಿಶ್ಚಿತಾರ್ಥವಾಗಿ ಇನ್ನೇನು ಮದುವೆಗೆ ಕೆಲವೇ ದಿನಗಳಲ್ಲಿ ಮದುವೆ ಎನ್ನುವಷ್ಟರಲ್ಲೇ, ಇತ್ತ ಕಡೆಯಿಂದ ಪ್ರಿಯಕರನ ಸಾವಿನ ಸುದ್ದಿ ಕೇಳಿ ಬಂದಿದೆ. ಇದರಿಂದ ಮನನೊಂದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶರತ್ (28) ಹಾಗೂ ಸಂಗೀತಾ (26) ಆತ್ಮಹತ್ಯೆಗೆ ಶರಣಾದವರು.
ಈ ಘಟನೆ ಬೀದರ್ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಇವರಿಬ್ಬರು ಕೂಡ ಆಳವಾಗಿ ಪ್ರೀತಿಸುತ್ತಿದ್ದರು. ಆದರೆ, ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಇಬ್ಬರು ಸಹ ಲಾಡಗೇರಿ ಬಡಾವಣೆಯ ನಿವಾಸಿಗಳು. ಇತ್ತೀಚೆಗೆ ಸಂಗೀತಾ ನಿಶ್ಚಿತಾರ್ಥ ಬೇರೊಂದು ಹುಡುಗನ ಜತೆ ನಡೆದಿತ್ತು. ಶೀಘ್ರದಲ್ಲಿ ಮದುವೆ ಸಹ ನಡೆಯಬೇಕಿತ್ತು. ಈ ಹಿನ್ನೆಲೆ ಮನನೊಂದು ಶರತ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಪ್ರಿಯಕರನ ಸಾವಿನ ಸುದ್ದಿ ಕೇಳಿ ಸಂಗೀತಾ ತನ್ನ ಮನೆಯಲ್ಲಿನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಬ್ಬರ ಪ್ರೀತಿಗೆ ಅಡ್ಡ ಬಂದ ಎರಡು ಮನೆಯವರು ಏನೂ ಹೇಳಲಾಗದೆ ಕಂಗಾಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
