ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡಗೆ ಮನೆ ಊಟ ನೀಡುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಆದೇಶ ಈ ಮೊದಲು ನೀಡಿತ್ತು. ಈ ಆದೇಶವನ್ನು ಜೈಲಾಧಿಕಾರಿಗಳು ಪ್ರಶ್ನೆ ಮಾಡಿದ್ದು, ಕೋರ್ಟ್ ತನ್ನದೇ ತೀರ್ಪನ್ನು ಇದೀಗ ಮಾರ್ಪಾಡು ಮಾಡಿದೆ. ವಾರದಲ್ಲಿ ಒಮ್ಮೆ ಮಾತ್ರ ಊಟ ನೀಡಲು ಅವಕಾಶ ನೀಡಿದೆ.
ಜೈಲೂಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಪವಿತ್ರಾ ಗೌಡ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಜೈಲೂಟದಿಂದ ಚರ್ಮರೋಗ ಉಂಟಾಗಿದೆ, ಮೈಮೇಲೆ ಗುಳ್ಳೆಗಳು ಆಗುತ್ತಿದೆ ಎಂದು ವಾದವನ್ನು ಮಂಡನೆ ಮಾಡಿದ್ದರು. ಫುಡ್‌ಪಾಯಿಸನ್ ಕೂಡಾ ಆಗುತ್ತಿದೆ ಎಂದು ಕೋರ್ಟ್ ಎದುರು ಹೇಳಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ಮನೆ ಊಟ ನೀಡಲು ಅವಕಾಶ ನೀಡಿದ್ದರು.
ಆದರೆ ಈ ಕುರಿತು ಜೈಲಿನ ಅಧಿಕಾರಿಗಳು, ಜೈಲೂಟ ಶುಚಿಯಾಗಿದೆ ಎಂದು ವಾದ ಮಂಡನೆ ಮಾಡಿದ್ದು, ಊಟ ತಿಂದ ಪವಿತ್ರ ಸೇರಿ ಯಾರೂ ಅಸ್ವಸ್ಥರಾಗಿಲ್ಲ. ಹೀಗಿರುವಾಗ ಪ್ರತ್ಯೇಕ ಮನೆ ಊಟದ ಅವಶ್ಯಕತೆ ಇಲ್ಲ ಎಂದು ವಾದ ಆಗಿತ್ತು.
ಇದೀಗ ಕೋರ್ಟ್ ಆದೇಶವನ್ನು ಮಾರ್ಪಾಡು ಮಾಡಿ ವಾರಕ್ಕೆ ಒಮ್ಮೆ ಮಾತ್ರ ಊಟ ನೀಡಲು ಆದೇಶ ಕೊಟ್ಟಿದೆ.
