Tumkur: ತಾಯಿ ವಿರುದ್ಧ ನ್ಯಾಯಾಲಯದಲ್ಲಿ ಮಗಳೇ ಸಾಕ್ಷಿ ಹೇಳಿದ ಘಟನೆ ನಡೆದಿದೆ. ಹೀಗಾಗಿ ಆರೋಪಿ ತಾಯಿಗೆ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ.
ಅಪರಾಧಿ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಯಶೋಧ ಹಾಗೂ ಆಕೆಯ ಪ್ರಿಯಕರ ಮಂಜುನಾಥ್ ಜೀವಾವಧಿ ಶಿಕ್ಷೆಗೆ ಒಳಗಾದವರು. ಮಂಜುನಾಥ್ ಹಾಗೂ ಯಶೋಧ ಮಧ್ಯೆ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಆಕೆಯ ಗಂಡ ಅಂಜಿನಪ್ಪ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಆತನನ್ನು ಮುಗಿಸಲು ಯಶೋಧ ಪ್ಲಾನ್ ಮಾಡಿದ್ದಳು.
2018ರ ಮೇ 12 ರಂದು ಮಧ್ಯರಾತ್ರಿ 1 ಗಂಟೆಯಲ್ಲಿ ಮಧುಗಿರಿ ತಾಲೂಕಿನ ಭಟ್ಟಗೆರೆಯಲ್ಲಿ ಅಂಜಿನಪ್ಪನನ್ನು ಕೊಲೆ ಮಾಡಿದ್ದರು. ಹಲ್ಲೆ ಮಾಡುವಾಗ ಅಂಜನಪ್ಪ ಒದ್ದಾಡುತ್ತಿದ್ದನ್ನು ಕಂಡು ಯಶೋಧ ಕೊನೆಗೆ ಪಿಕಾಸಿನಿಂದ ಹೊಡೆದಿದ್ದಳು. ಇದರಿಂದ ಅಂಜಿನಪ್ಪ ಸಾವಿಗೀಡಾಗಿದ್ದರು.
ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಬೇಲ್ ಮೇಲೆ ಇಬ್ಬರು ಆರೋಪಿಗಳು ಹೊರಬಂದಿದ್ದಾರೆ. ಇದೀಗ ನ್ಯಾಯಾಧೀಶರಾದ ನಾಗೀರೆಡ್ಡಿ ಅವರಿಂದ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
