Home » Gujarath: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋರ್ಟ್‌ಗಳು; ಒಂದೇ ದಿನ 7 ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

Gujarath: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋರ್ಟ್‌ಗಳು; ಒಂದೇ ದಿನ 7 ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

0 comments

Gujarath: ಗುಜರಾತ್‌ನ ಕೋರ್ಟ್‌ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಒಂದೇ ದಿನದಲ್ಲಿ ಗುಜರಾತ್‌ನಲ್ಲಿರುವ ವಿವಿಧ ಕೋರ್ಟ್‌ಗಳು ಏಳು ಮಂದಿ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವ ಘಟನೆ ನಡೆದಿದೆ. ಅಮ್ರೇಲಿ, ವಡೋದರಾ, ರಾಜ್‌ಕೋಟ್‌ನ ವಿವಿಧ ನ್ಯಾಯಾಲಯಗಳು ಪೋಕ್ಸೋ ಪ್ರಕರಣಗಳಲ್ಲಿ ಒಂದೇ ದಿನ ಏಳು ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಪೊಲೀಸರು ಈ ಎಲ್ಲಾ ಪ್ರಕರಣಗಳಲ್ಲಿ ಶೀಘ್ರದಲ್ಲಿ ತನಿಖೆ ಮಾಡಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಹಾಗೆನೇ ಕೋರ್ಟ್‌ ಕೂಡಾ ಶೀಘ್ರದಲ್ಲಿಯೇ ವಿಚಾರಣೆ ಮಾಡಿ ತೀರ್ಪು ಪ್ರಕಟ ಮಾಡಿದೆ.

ಅಮ್ರೇಲಿಯಲ್ಲಿ ಎರಡು ಪ್ರಕರಣಗಳಲ್ಲಿ ಆರೋಪಿಯನ್ನು ಬಂಧನ ಮಾಡಿದ 17 ದಿನಗಳಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ರಾಜ್‌ಕೋಟ್‌ ನಗರದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರು 40 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪತನ್ವಾವ್‌ ಪ್ರಕರಣದಲ್ಲಿ ಘಟನೆಯ ದಿನವೇ ರಾಜ್‌ಕೋಟ್‌ ಗ್ರಾಮೀಣ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದರು, ಭಯವದರ್‌ ಪ್ರಕರಣದಲ್ಲಿ 7 ದಿನಗಳಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿತ್ತು.

You may also like