Home » Covid: ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಗಳು ಏರಿಕೆ: ಲಾಕ್ ಡೌನ್ ಭೀತಿಯಲ್ಲಿ ಕರ್ನಾಟಕ!!

Covid: ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಗಳು ಏರಿಕೆ: ಲಾಕ್ ಡೌನ್ ಭೀತಿಯಲ್ಲಿ ಕರ್ನಾಟಕ!!

0 comments
COVID

Covid: ಬೆಂಗಳೂರಿನಲ್ಲಿ ಕೋವಿಡ್​​ಗೆ (Covid) ಓರ್ವ ನಿನ್ನೆಯಷ್ಟೇ ಮೃತಪಟ್ಟಿದ್ದು, ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 38ಕ್ಕೇರಿಕೆಯಾಗಿವೆ. ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕಠಿಣ ನಿಮಯಗಳು ಜಾರಿ ಹಾಗೂ ಲಾಕ್​​ಡೌನ್​​​ ಜಾರಿ ಬಗ್ಗೆ ಸೂಕ್ಷ್ಮ ಸುಳಿವನ್ನು ನೀಡಿದ್ದಾರೆ.

ನಿನ್ನೆ ಓರ್ವ ವೃದ್ಧ ಸೋಂಕಿಗೆ ಮೃತಪಟ್ಟಿದ್ದಾರೆ. ಮೃತ ವೃದ್ಧನಿಗೆ ತೀವ್ರ ಆರೋಗ್ಯ ಸಮಸ್ಯೆ ಇತ್ತು. ಇನ್ನೂ ಸ್ಪಷ್ಟ ವರದಿ ಬರಬೇಕಿದೆ. ವಸ್ತು ಸ್ಥಿತಿ ನೋಡಿಕೊಂಡು ಲಾಕ್​​ಡೌನ್​​ ಬಗ್ಗೆ ವಿಚಾರ ಮಾಡಲಾಗುವುದು. ಎಲ್ಲರೂ ಜವಾಬ್ದಾರಿಯಿಂದ ಇರಬೇಕು ಎಂದು ಹೇಳಿದ್ದಾರೆ.

ನಿನ್ನೆ ಒಟ್ಟಾರೆ ಬೆಂಗಳೂರು ನಗರದಲ್ಲಿ 32, ಮೈಸೂರಲ್ಲಿ 2, ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರದಲ್ಲಿ, ದಕ್ಷಿಣ ಕನ್ನಡದಲ್ಲಿ ತಲಾ 1 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.

You may also like