Home » PM Modi: ದೇಶದಲ್ಲಿ 75,000 ಹೊಸ ಮೆಡಿಕಲ್ ಸೀಟು ಸೃಷ್ಟಿ, ಸ್ವತಂತ್ರೋತ್ಸವ ಸಂದರ್ಭದಲ್ಲಿ ಮೋದಿ ಘೋಷಣೆ

PM Modi: ದೇಶದಲ್ಲಿ 75,000 ಹೊಸ ಮೆಡಿಕಲ್ ಸೀಟು ಸೃಷ್ಟಿ, ಸ್ವತಂತ್ರೋತ್ಸವ ಸಂದರ್ಭದಲ್ಲಿ ಮೋದಿ ಘೋಷಣೆ

by ಹೊಸಕನ್ನಡ
1 comment

PM Modi: ದೇಶದಲ್ಲಿ ನೀಟ್ ಹಗರಣದಿಂದಾಗಿ ಭಾರಿ ದೊಡ್ಡ ಗದ್ದಲ ಏರ್ಪಟ್ಟಿತ್ತು. ಅದು ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಈಗ ದೇಶದಲ್ಲಿ 75,000 ಹೊಸ ವೈದ್ಯಕೀಯ ಸೀಟುಗಳ ಸೃಷ್ಟಿ ಮಾಡುವುದಾಗಿ ಮೋದಿ (PM Modi)  ಅವರು ಘೋಷಿಸಿದ್ದಾರೆ.

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಲಕ್ಷ- ಕೋಟಿ ಖರ್ಚು ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ನಾವು 75,000 ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರ್ಪಡೆ ಇನ್ನು ಸುಮಾರು 10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರ್ಪಡೆಯಾಗಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದನ್ನು ನೋಡಿ ನಾವು ಹೆಮ್ಮೆಪಡುತ್ತೇವೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಲ್ಲದೆ ಮೋದಿ ತಮ್ಮ ಭಾಷಣದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಆದ ಮತ್ತು ಆಗುತ್ತಿರುವ ಸಾಧನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ್ದೇವೆ. ಹಿಂದಿನ ಹಲವು ನಿರ್ಬಂಧಗಳನ್ನು ತೆರವುಗೊಳಿಸಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನೂರಾರು ಸ್ಟಾರ್ಟ್‌ಅಪ್‌ಗಳು ಬಂದಿವೆ. ಇದು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನರನ್ನು ಪರಿವಾರಜನ್ ಎಂದು ಸಂಬೋಧಿಸಿದ್ದಾರೆ.ಕುಟುಂಬಸ್ಥರೇ ಎಂದು ದೇಶದ ಜನರನ್ನು ಮೋದಿ ಕರೆದದ್ದು ವಿಶೇಷವೆನಿಸಿದೆ.

You may also like

Leave a Comment