3
Crime: ಸ್ಮಶಾನ ಜಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪಿಯೋರ್ವನನ್ನು ಪೊಲೀಸರು ಗಾಂಜಾ ಸಮೇತ ಬಂಧಿಸಿದ್ದಾರೆ. ಹೇರೂರು ಗ್ರಾಮದ ಪ್ರಶಾಂತ್ (29) ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿ ಆಗಿದ್ದು ಈತನಿಂದ 1 ಕೆ. ಜಿ. 730 ಗ್ರಾಂ ತೂಕದ 19 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಕುಶಾಲನಗರ ಶೈಲಜಾ ಬಡಾವಣೆಯಲ್ಲಿರುವ ಸ್ಮಶಾನ ಜಾಗದಲ್ಲಿ ನಿಷೇಧಿತ ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.
