Home » Hassan Rape: 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 73ರ ವೃದ್ದನಿಂದ ನಿರಂತರ ರೇಪ್‌! ಗರ್ಭಿಣಿಯಾದ ಬಾಲಕಿ, ತಾಯಿ ವಿಷಸೇವನೆ!!!

Hassan Rape: 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 73ರ ವೃದ್ದನಿಂದ ನಿರಂತರ ರೇಪ್‌! ಗರ್ಭಿಣಿಯಾದ ಬಾಲಕಿ, ತಾಯಿ ವಿಷಸೇವನೆ!!!

by Mallika
0 comments

Hassan News: ಅಪ್ರಾಪ್ತ ಬಾಲಕಿ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆದಿರುವ ಕುರಿತು ವರದಿಯಾಗುತ್ತಲೇ ಇರುತ್ತದೆ. ಇಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ಇದ್ದರೂ ಕೂಡಾ ಕಾಮುಕರು ತಮ್ಮ ಈ ಕುಕೃತ್ಯವನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಈ ಸುದ್ದಿಗೆ ಸೇರ್ಪಡೆಯಾಗಿ ಹಾಸನ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ ನಡೆದಿದೆ. 13 ವರುಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ 73ವರ್ಷದ ಮುದುಕನೊಬ್ಬ, ಈಗ ಈ ಬಾಲಕಿ ಎರಡು ತಿಂಗಳು ಗರ್ಭಿಣಿಯಾಗಿದ್ದು, ಪೋಷಕರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾ ನಡೆದಿದೆ. ನಿರಂತರ ಅತ್ಯಾಚಾರದಿಂದ 13ವರ್ಷದ ಬಾಲಕಿ ತನಗೆ ಅರಿವಿಲ್ಲದೇ ಇದೀಗ ಗರ್ಭಿಣಿಯಾಗಿದ್ದಾಳೆ. ಗ್ರಾಮದ ಮಹಿಳೆಯರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಕೊಡುವುದಾಗಿ ತಾನೊಬ್ಬ ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಂಸಿಕೊಂಡು ಮಹಿಳೆಯರ ಮನೆಗೆ ಹೋಗುತ್ತಿದ್ದ ವೃದ್ಧ ಈಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ.

ಅತ್ಯಾಚಾರ ಮಾಡಿದ ವೃದ್ಧ ಆರೋಪಿಯನ್ನು ಮೀಸೆ ಮಂಜಯ್ಯ (73) ಎಂದು ಗುರುತಿಸಲಾಗಿದೆ. ತನ್ನ ಮಗಳಿಗಾದ ಅನ್ಯಾಯದಿಂದ ತಾಯಿ ವಿಷ ಸೇವಿಸಿದ್ದು, ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಮೀಸೆ ಮಂಜಯ್ಯನನ್ನು ಬಂಧಿಸಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

 

 

You may also like

Leave a Comment