Home » Belagavi: ಒಬ್ಬಳು ಹುಡುಗಿಗಾಗಿ ಎರಡು ತಂಡಗಳ ನಡುವೆ ಭಾರೀ ಘರ್ಷಣೆ – ನಂತರ ಏನಾಯ್ತು?!

Belagavi: ಒಬ್ಬಳು ಹುಡುಗಿಗಾಗಿ ಎರಡು ತಂಡಗಳ ನಡುವೆ ಭಾರೀ ಘರ್ಷಣೆ – ನಂತರ ಏನಾಯ್ತು?!

1 comment
Belagavi

Belagavi: ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಗಳು ಚಿಗುರೊಡೆಯುವುದು ಸಾಮಾನ್ಯ. ಅಂತೆಯೇ ಇಂದು ಹೆಚ್ಚಾಗಿ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಒಬ್ಬಳು ಹುಡುಗಿಗಾಗಿ ಇಬ್ಬರು ಪ್ರೀತಿಸುವುದೇನಾದರೂ ನೀವು ನೋಡಿದ್ದೀರಾ? ಇಂತಹ ಒಂದು ವಿಚಿತ್ರ ಘಟನೆ ನಡೆದಿದ್ದು, ಆ ಒಬ್ಬಳು ಹುಡುಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಕೂಡ ನಡೆದಿದೆ.

ಬೆಳಗಾವಿ(Belagavi)ಯ ನಾವಗೆ ಎಂಬ ಗ್ರಾಮವೊಂದರಲ್ಲಿ ಇಂತಹ ವಿಚಿತ್ರ ಘಟನೆಯೊಂದು ನಡೆದಿದೆ. ಒಬ್ಬಳು ಹುಡುಗಿಗಾಗಿ ಇಬ್ಬರು ಹುಡುಗರು ಕಿತ್ತಾಡಿ ಬೀದಿ ರಂಪ ಮಾಡಿಕೊಂಡಿದ್ದಾರೆ. ದುರದೃಷ್ಟ ಎಂದುರೆ ಓದುವ ವಯಸ್ಸಲ್ಲಿ ಪ್ರೀತಿಸುವುದು(Love) ತಪ್ಪು ಎಂದು ಪಂಚರು ಬುದ್ಧಿವಾದ ಹೇಳಿದ್ದಕ್ಕೆ ಗ್ರಾಮದ ಹಿರಿಯರೂ ಎಂಬುದನ್ನು ನೋಡದೆ ಪುಂಡರು ಅವರ ಮನೆಗೆ ನುಗ್ಗಿ ಮನೆ ಧ್ವಂಸಕ್ಕೆ ಯತ್ನ ನಡೆಸಿದ್ದಾರೆ.

ಇದನ್ನು ಓದಿ: Odisha Puri Jagannath Temple: ಪುರಿ ಜಗನ್ನಾಥನ ದರ್ಶನಕ್ಕೆ ತೆರಳುವ ಭಕ್ತರೇ ಈ ವಿಚಾರ ತಿಳಿದುಕೊಳ್ಳಿ: ಈ ನಿಯಮ ಪಾಲಿಸದಿದ್ದರೆ ದರ್ಶನ ಭಾಗ್ಯ ಸಿಗದು!!

ಹೌದು, ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ಮಧ್ಯೆ ಗಲಾಟೆ ನಡೆದಿದ್ದು, ನಾವಗೆ ಗ್ರಾಮದ ಪಂಚರಾದ ಮಾರುತಿ ಹುರಕಡ್ಲಿ ಅವರು ಪ್ರೀತಿ ಬೇಡವೆಂದು ಬುದ್ಧಿವಾದ ಹೇಳಿದಕ್ಕೆ ಮಾರುತಿ ಹುರಕಡ್ಲಿ ಮನೆ ದ್ವಂಸಕ್ಕೆ ಯತ್ನ ಮಾಡಿದ್ದಾರೆ. 30 ಕ್ಕೂ ಅಧಿಕ ಯುವಕರ ಗುಂಪಿನಿಂದ ಗ್ರಾಮದ ಹಿರಿಯರ ನಾಲ್ಕು ಮನೆ ಮೇಲೆ ದಾಳಿ(Attack) ಮಾಡಲಾಗಿದೆ. ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ 30ಕ್ಜೂ ಅಧಿಕ ಪುಂಡರು, ಮನೆಯ ಮುಂದೆ ಇದ್ದ ಕಾರು, ಮನೆಯ ಗ್ಲಾಸ್ ಒಡೆದು ಹಾಕಿದ್ದಾರೆ.

You may also like

Leave a Comment