Home » Crime News: ಮಹಿಳೆಯರ ಒಳ ಉಡುಪು ಕಳವು, ಅಶ್ಲೀಲ ಫೋಟೋ ಅಪ್ಲೋಡ್‌- ಯುವಕ ಅರೆಸ್ಟ್‌!!

Crime News: ಮಹಿಳೆಯರ ಒಳ ಉಡುಪು ಕಳವು, ಅಶ್ಲೀಲ ಫೋಟೋ ಅಪ್ಲೋಡ್‌- ಯುವಕ ಅರೆಸ್ಟ್‌!!

by Mallika
1 comment
Crime News

ಯುವತಿಯರ ಒಳುಡುಪು, ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಇನ್ಸ್ಟಾಗ್ರಾಮ್‌ಗೆ ಅಪ್ಲೋಡ್‌ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿರುವ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.

ವಿಕೃತಿ ಎಸಗುತ್ತಿರುವ ಯುವಕನ ವಿರುದ್ಧ ಲೋಕುಳಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ. ಲೋಕುಳಿ ಗ್ರಾಮದ ಮಂಥನ ದಶರಥ ಪಾಟೀಲ್‌ (22) ಬಂಧಿತ ಆರೋಪಿ. ಹೆಣ್ಮಕ್ಕಳು ಮನೆಯ ಹಿತ್ತಲಿನಲ್ಲಿ ಒಣಗಲು ಹಾಕಿದ ಒಳ ಉಡುಪುಗಳನ್ನು ಕದಿಯುವುದು, ಕತ್ತರಿಸಿ ಬೇರೆಯವರ ಮನೆಯಲ್ಲಿ ಹಾಕುವುದು, ಗ್ರಾಮದ ಯುವತಿಯರ, ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಜಾಲತಾಣಗಳಿಗೆ ಅಪ್ಲೋಡ್‌ ಮಾಡುತ್ತಿದ್ದ ಎಂದು ಮಹಿಳೆಯರು ದೂರು ದಾಖಲು ಮಾಡಿದ್ದಾರೆ.

ಮಹಿಳೆಯರು ಪ್ರತಿಭಟನೆ ಮಾಡಿದ ನಂತರ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: Madhu Bangarappa: ಹಳೆ ಪಿಂಚಣಿ ಜಾರಿ ಕುರಿತು ಬಂತು ಬಿಗ್ ಅಪ್ಡೇಟ್ – ಸಚಿವ ಮಧು ಬಂಗಾರಪ್ಪರಿಂದ ಹಲವು ಗುಡ್ ನ್ಯೂಸ್ ಘೋಷಣೆ !!

You may also like

Leave a Comment