Home » Self Harming: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ!!! ಕಾರಣವೇನು ಗೊತ್ತೇ?

Self Harming: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ!!! ಕಾರಣವೇನು ಗೊತ್ತೇ?

by Mallika
1 comment
Self Harming

Self Harming: ಇಂಜಿನಿಯರಿಂಗ್‌ ವಿದ್ಯಾರ್ಥಿನಿಯೋರ್ವಳು ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ನಗರದ ಹೊರವಲಯದ ರಾಜೀವ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ (Rajiv Institute of Technology College) ನಡೆದಿದೆ.

ಮಾನ್ಯ(19) ಮೃತ ವಿದ್ಯಾರ್ಥಿನಿ. ಈಕೆ ಎಲೆಕ್ಟ್ರಾನಿಕ್‌ ಆಂಡ್‌ ಕಮ್ಯುನಿಕೇಷನ್‌ ಓದುತ್ತಿದ್ದಳು.

ನ.2 ರಂದು ಈಕೆ ಮೊದಲ ವರ್ಷದ ಆಂತರಿಕ ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷೆ ಸಮಯದಲ್ಲಿ ನಕಲು ಮಾಡಿದ ಆರೋಪ ಕೇಳಿ ಬಂದಿದೆ. ಆ ಸಮಯದಲ್ಲಿ ಆಕೆಯನ್ನು ಪರೀಕ್ಷಾ ಮೇಲ್ವಿಚಾರಕರು ಕೇಳಿದ್ದಾರೆ, ಹಾಗೂ ಪ್ರಾಂಶುಪಾಲರ ಬಳಿಯೂ ಕರೆದುಕೊಡು ಹೋಗಿದ್ದಾರೆ. ನಂತರ ಕ್ಷಮಾಪಣಾ ಪತ್ರ ಬರೆದುಕೊಂಡುವಂತೆ ಸಹ ಉಪನ್ಯಾಸಕರು ಹೇಳಿದ್ದರೆನ್ನಲಾಗಿದೆ. ನಂತರ ಮಾನ್ಯ ಪ್ರಾಂಶುಪಾಲರ ಕೊಠಡಿಗೆ ಬಂದಿದ್ದು, ಅಲ್ಲಿಂದ ಹೊರಗಡೆ ಬಂದವಳೇ ಕಾಲೇಜಿನ ಐದನೇ ಮಹಡಿಗೆ ಹೋಗಿದ್ದು, ಅಲ್ಲಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಡಾವಣೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

 

ಇದನ್ನು ಓದಿ: KSRTC ಬಸ್‌ನಲ್ಲಿ ಫ್ರೀಯಾಗಿ ಓಡಾಟ ಮಾಡಿದ ನಕಲಿ ಕಂಡಕ್ಟರ್!!!‌ ಸತ್ಯ ಬಯಲಾಗಿದ್ದು ಹೇಗೆ ಗೊತ್ತೇ?

You may also like

Leave a Comment