Home » Suchna Seth: ತಾನೇ ಹೆತ್ತ ಮಗನನ್ನು ಹತ್ಯೆಗೈದ ಸೂಚನಾ ಸೇಠ್‌ಗೆ ಮಾನಸಿಕ ಸಮಸ್ಯೆಯಿಲ್ಲ-ಪೊಲೀಸ್‌ರಿಂದ ಮಾಹಿತಿ

Suchna Seth: ತಾನೇ ಹೆತ್ತ ಮಗನನ್ನು ಹತ್ಯೆಗೈದ ಸೂಚನಾ ಸೇಠ್‌ಗೆ ಮಾನಸಿಕ ಸಮಸ್ಯೆಯಿಲ್ಲ-ಪೊಲೀಸ್‌ರಿಂದ ಮಾಹಿತಿ

0 comments

Suchna Seth: ಏರ್ ಇಂಡಿಯಾ ಸ್ಟಾರ್ಟ್‌ಅಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದ ಸೂಚನಾ ಸೇಠ್‌ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿದ್ದಾರೆ. ತನ್ನ ಪುಟ್ಟ ಕಂದನನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಕೊಲೆ ಆರೋಪಿ ಸೂಚ್ನಾ ಸೇಠ್ (Suchna Seth)ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಮಾನಸಿಕ ಅಸ್ವಸ್ಥತತೆ ಅಥವಾ ಮಾನಸಿಕ ವರ್ತನೆಯ ಲಕ್ಷಣಗಳು ಕಂಡು ಬಂದಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

 

ಫೆಬ್ರವರಿ 2ರಂದು ಇನ್‌ಸ್ಟಿಟ್ಯೂಟ್ ಆಫ್ ಸೈಕಾಲಜಿ ಅಂಡ್ ಹ್ಯೂಮನ್ ಬಿಹೇವಿಯರ್‌ನಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಪೊಲೀಸರು ಗೋವಾದ ಮಕ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವರದಿಯು ಮನೋರೋಗಶಾಸ್ತ್ರದ (ಮಾನಸಿಕ ಕಾಯಿಲೆ) ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಲಾಗಿದೆ.

 

ಆರೋಪಿ ಸೂಚನಾ ಸೇಠ್‌ ತಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ತನ್ನ ಮಗಳಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಿ ಅರ್ಜಿಯಲ್ಲಿ ತಿಳಿಸಲಾಗಿತ್ತು. ಇದೀಗ ಈ ಅರ್ಜಿಗೆ ಸ್ಪಂದಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಸೇಠ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಪೊಲೀಸರು ಆತನ ಮಾನಸಿಕ ಆರೋಗ್ಯವನ್ನು ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಹೇಳಿದ್ದರು.

 

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಮುಖ್ಯಸ್ಥೆ ಸೂಚನಾ ಸೇಠ್ (39) ಅವರನ್ನು ಜನವರಿ 8 ರಂದು ಬಂಧಿಸಲಾಗಿತ್ತು. ಗೋವಾದ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದ ಸೂಚನಾ ಸೇಠ್‌ ತನ್ನ ಮಗನನ್ನು ಕೊಲೆ ಮಾಡಿದ್ದು, ಸದ್ಯ ಈಕೆ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ : Uttar pradesh :ಸಿಂಗರ್‌ ಮಲ್ಲಿಕಾ ರಜಪೂತ್‌ ಮನೆಯಲ್ಲೇ ನೇಣು ಬಿಗಿದು ಸಾವು

You may also like

Leave a Comment