5
ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಈ ಘಟನೆ ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ.
ವೈಷ್ಣವ್ ಎಂಬಾತನೇ ಮೃತ ಬಾಲಕ. ಅವಳಿ ಮಕ್ಕಳಲ್ಲಿ ಒಬ್ಬ ಈ ಮಗು. ಈ ಘಟನೆ ನಡೆದ ವೇಳೆ ಮಗು ಮತ್ತು ಮಗುವಿನ ತಾಯಿ ಮಾತ್ರ ಮನೆಯಲ್ಲಿದ್ದರೆನ್ನಲಾಗಿದೆ. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಪಾಲಕ್ಕಾಡ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆಂದು ಹೋಗಿದ್ದರು.
ಚಕ್ಕುಲಿ ತಿಂದುಕೊಂಡು ಆಟವಾಡುತ್ತಿದ್ದ ಮಗು ಏಕಾ ಏಕಿ ನುಂಗಿ ಬಿಟ್ಟಿದ್ದು, ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡಿದೆ. ಕೂಡಲೇ ಉಸಿರಾಡಲು ಆಗಲಿಲ್ಲ. ಕೂಡಲೇ ಮಗುವನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
