Home » CROCODILE ATTACK: 16 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ – ಸ್ನಾನಕ್ಕೆ ಹೋದಾಗ ಘಟನೆ

CROCODILE ATTACK: 16 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ – ಸ್ನಾನಕ್ಕೆ ಹೋದಾಗ ಘಟನೆ

0 comments

CROCODILE ATTACK: ಇಂದು ಬೆಳಗ್ಗೆ ಸ್ನಾನಕ್ಕೆಂದು ನದಿಗೆ ಇಳಿದ 16 ವರ್ಷದ ವೇದಮೂರ್ತಿ ಎಂಬಾತನ ಮೇಲೆ ಮೊಸಳೆಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿಂದು ನಡೆದಿದೆ. ಮೊಸಳೆ ಬಾಯಿಗೆ ಸಿಲುಕಿದ್ದ ವೇದಮೂರ್ತಿಯನ್ನು ಸ್ಥಳದಲ್ಲೇ ಇದ್ದ ವೀರೇಶ್ ಎಂಬಾತ ರಕ್ಷಿಸಿದ್ದಾನೆ. ಬಾಲಕನ ಕೈ ಮತ್ತು ಎದೆ ಭಾಗದಲ್ಲಿ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.

ಬಾಲಕನ ಮೇಲೆ ಮೊಸಳೆ ದಾಳಿ ಮಾಡಿದಾಗ ವೀರೇಶ್, ಪಕ್ಕದಲಲ್ಲೇ ಇದ್ದ ಕಲ್ಲನ್ನು ತೆಗೆದುಕೊಂಡು ಮೊಸಳೆಯ ಮೇಲೆ ಎತ್ತಾಕಿ ಆ ಬಾಲಕನನ್ನು ಬಚಾವ್‌ ಮಾಡಿದ್ದಾನೆ. ಬಾಲಕನಿಗೆ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ತಕ್ಷಣ ಗಾಯಾಳು ಬಾಲಕನನ್ನು ಕಂಪ್ಲಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

You may also like