Home » CBI Raid: ಕ್ರಿಪ್ಟೋ ಕರೆನ್ಸಿ ಕೇಸ್;‌ ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ

CBI Raid: ಕ್ರಿಪ್ಟೋ ಕರೆನ್ಸಿ ಕೇಸ್;‌ ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ

0 comments

CBI Raids: ಬೆಂಗಳೂರು ಸೇರಿ ದೇಶದ 60 ಕಡೆ ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್‌, ನಾಂದೇಡ್‌, ಕೊಲ್ಲಾಪುರ ಸೇರಿ ಹಲವು ಕಡೆ ಸಿಬಿಐ ದಾಳಿ ನಡೆಸಿದೆ.

ರಾಜ್ಯದಲ್ಲಿ ಹಲವೆಡೆ ಬಿಟ್‌ ಕಾಯಿನ್‌, ಕ್ರಿಪ್ಟೋ ಕರೆನ್ಸಿ ಹಗರಣ ಕುರಿತು ಎಫ್‌ಐಆರ್‌ ದಾಖಲಾಗಿತ್ತು. ನಂತರ ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನು ಸಿಬಿಐಗೆ ತನಿಖಗೆ ವಹಿಸಿತ್ತು. ಈ ಸಂಬಂಧ ಮಂಗಳವಾರ ಬೆಂಗಳೂರು ಸೇರಿ ಹಲವು ಕಡೆ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭ ಕ್ರಿಪ್ಟೀ ವ್ಯಾಲೆಟ್‌ಗಳು, ಡಿಜಿಟಲ್‌ ಸಾಕ್ಷ್ಯಗಳು, ಡಿಜಿಟಲ್‌ ಸಾಧನಗಳು ಪತ್ತೆಯಾಗಿದೆ. ಇಮೇಲ್‌ ಮತ್ತು ಕ್ಲೌಡ್‌ನಲ್ಲಿದ್ದ ಸಾಕ್ಷ್ಯಗಳನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ತನಿಖೆ ಮುಂದುವರಿಸಿದೆ.

You may also like