7
CT Ravi: ಕನ್ನಡ ತಾಯಿ ಭುವನೇಶ್ವರಿ ಕುರಿತು ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ಎಂಎಲ್‌ಸಿ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ರಾಯಚೂರಿನಲ್ಲಿ ಮಾತನಾಡುತ್ತಾ, ಬಾನು ಮುಷ್ತಾಕ್ ಅವರು ಇಸ್ಲಾಂ ಆಗಿರಬಹುದು. ಆದರೆ ಮಾತನಾಡುವಾಗ ಈ ನೆಲದ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಇಸ್ಲಾಂ ಬಗ್ಗೆ ನಾವೇನಾದರೂ ಆ ರೀತಿ ಮಾತನಾಡಿದ್ದರೆ ಕಲ್ಲಲ್ಲಿ ಹೊಡೆದು ಸಾಯಿಸುತ್ತಿದ್ದರು. ನಾವು ಹಾಗೇನೂ ಮಾಡಿಲ್ಲ. ಆ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಲಿ ಎಂಬುವುದು ನಮ್ಮ ಆಗ್ರಹ ಅಷ್ಟೇ ಎಂದು ಹೇಳಿದರು.
