Home » ಫ್ರಿಡ್ಜ್ ಮುಟ್ಟಿದಾಗ ಶಾಕ್ ಹೊಡೆದು ಮಗು ದುರ್ಮರಣ

ಫ್ರಿಡ್ಜ್ ಮುಟ್ಟಿದಾಗ ಶಾಕ್ ಹೊಡೆದು ಮಗು ದುರ್ಮರಣ

by Praveen Chennavara
0 comments

ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗುವೊಂದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.

ಹೈದರಾಲಿ(4) ಮೃತ ಬಾಲಕ. ಈತ ಐವರ್ನಾಡಿನ ಆದಂ ಎಂಬವರ ಮಗಳು ಅಪ್ಸರ ಹಾಗೂ ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಅಲಿ ಅವರ ಪುತ್ರ.

ಬಾಲಕ ಮನೆಯಲ್ಲಿ ಫ್ರಿಡ್ಜ್ ಮುಟ್ಟಿದ್ದಾಗ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಘಟನೆ ಅಲಿ ಅವರ ಪತ್ನಿ ತವರು ಮನೆ ಬೆಳ್ಳಾರೆಯಲ್ಲಿ ನಡೆದಿದೆ.

You may also like

Leave a Comment