Home » D.K. Shivakumar : ಡಿ.ಕೆ. ಶಿವಕುಮಾರ್ ಭಾಗಮಂಡಲ ತಲಕಾವೇರಿಯಲ್ಲಿ ವಿಶೇಷ ಪೂಜೆ: ಬೃಹತ್ ಜಲ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ

D.K. Shivakumar : ಡಿ.ಕೆ. ಶಿವಕುಮಾರ್ ಭಾಗಮಂಡಲ ತಲಕಾವೇರಿಯಲ್ಲಿ ವಿಶೇಷ ಪೂಜೆ: ಬೃಹತ್ ಜಲ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ

0 comments

Save Water: ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DCM D K Shivakumar) ರವರು ಇಂದು ಮಾರ್ಚ್, 21 ರಂದು ಬೆಳಗ್ಗೆ ಭಾಗಮಂಡಲಕ್ಕೆ ಭೇಟಿ ನೀಡಿ ಬೃಹತ್ ಜಲ ಸಂರಕ್ಷಣಾ ಅಭಿಯಾನದ ಪ್ರಯುಕ್ತ ಭಾಗಮಂಡಲ(Bhagamandala) ಮತ್ತು ತಲಕಾವೇರಿಯಲ್ಲಿ(Thalacauvery) ಪೂಜೆ ಸಲ್ಲಿಸಿದರು. ಭೇಟಿಯ ಸಂದರ್ಭ ಅವರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್ ಪೋನ್ನಣ್ಣ(S A Ponvannan), ಮಡಿಕೇರಿ ಕ್ಷೇತ್ರದ ಶಾಸಕರಾದ ಮಂಥರ್ ಗೌಡ(Manthar Gowda), ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ, ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು, ಪಕ್ಷದ ಮುಖಂಡರುಗಳು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಕೆಪಿಸಿಸಿ ಮುಖಂಡರಾದ ಚಂದ್ರಮೌಳಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯ ಅವರಣದಲ್ಲಿ ಇಂದು ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿ ಸನ್ನಿಧಿಯ ಕುಂಡಿಕೆಯಿಂದ ಪವಿತ್ರ ತೀರ್ಥವನ್ನು ಸುಮಾರು 20 ಸಾವಿರ ಬಾಟಲಿಗಳಲ್ಲಿ ತುಂಬಿಸಿ ಟ್ರಕ್ ಮುಖಾಂತರ ಬೆಂಗಳೂರಿಗೆ ಈಗಾಗಲೇ ರವಾನಿಸಲಾಗಿದೆ. ಬೆಂಗಳೂರು ನಗರ ಜನತೆಯ ದಾಹ ತಣಿಸುವ ಕಾವೇರಿ ಮಾತೆಗೆ ಇಂದು ಬೆಳಿಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ನಮನ ಸಲ್ಲಿಸಿ ಆನಂತರ ಭಕ್ತರಿಗೆ ಶ್ರೀ ತಲಕಾವೇರಿ ತೀರ್ಥವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

You may also like