Home » Accide Attack: ಕಡಬದಲ್ಲಿ ಆಸಿಡ್‌ ದಾಳಿ; ಲಕ್ಷ್ಮೀ ಹೆಬ್ಬಾಳ್ಕರ್‌ ಮೇಲೆ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ವಾಗ್ದಾಳಿ

Accide Attack: ಕಡಬದಲ್ಲಿ ಆಸಿಡ್‌ ದಾಳಿ; ಲಕ್ಷ್ಮೀ ಹೆಬ್ಬಾಳ್ಕರ್‌ ಮೇಲೆ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ವಾಗ್ದಾಳಿ

1 comment
Accide Attack

Kadaba Government College: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ ಮೂವರು ಹೆಣ್ಣುಮಕ್ಕಳ ಮೇಲೆ ಯುವಕನೋರ್ವ ಆಸಿಡ್‌ ದಾಳಿ ನಡೆಸಿದ ಘಟನೆಯನ್ನು ಖಂಡಿಸಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷಇ ಹೆಬ್ಬಾಳ್ಕರ್‌ (Lakshmi Hebbalkar) ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: Kadaba: ಕಾಲೇಜಿನಲ್ಲಿ ಆಸಿಡ್‌ ದಾಳಿ ಪ್ರಕರಣ; ಘಟನೆ ಕುರಿತು ಎಸ್‌.ಪಿ.ಏನಂದ್ರು?

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬೆಳಗ್ಗೆ ಕಾಲೇಜಿಗೆ ಬಂದು ಸಿದ್ಧತೆ ಮಾಡುತ್ತಿದ್ದ ಸಂದರ್ಭದಲ್ಲಿ ಅಬೀನ್‌ ಎಂಬಾತ ಬಂದು ಆಸಿಡ್‌ ದಾಳಿ ಮಾಡಿದ್ದಾನೆ. ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರೋಪಿ ಅಲಿನಾಳನ್ನು ಟಾರ್ಗೆಟ್‌ ಮಾಡಿದ್ದು, ಆಕೆಯ ಮೇಲೆ ದಾಳಿ ಮಾಡಿದಾಗ ಇತರ ಇಬ್ಬರು ವಿದ್ಯಾರ್ಥಿನಿಯರಿಗೆ ಸಿಡಿದು ಗಾಯಗಳಾಗಿದೆ. ಮುಬೀನ್‌ ಅಲೀನಾಳನ್ನು ಪ್ರೀತಿ ಮಾಡುತ್ತಿದ್ದು, ಆಕೆ ಆತನ ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಈ ಆಕ್ರೋಶದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದೀಗ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮೇಲೆ ಅಟ್ಯಾಕ್‌ ಮಾಡಿದ್ದಾರೆ.

ಮಂಗಳೂರಿನಲ್ಲಿ ಯುವತಿಯರ ಮೇಲೆ ಆಸಿಡ್‌ ದಾಳಿ ನಡೆದಿದೆ. ಇದು ಆಕೆಯನ್ನು ಶಾಶ್ವತವಾಗಿ ಮುಗಿಸುವ ಕೆಲಸ. ಇದರ ಹೊಣೆ ಹೊತ್ತ ಗೃಹಸಚಿವರು ಆ ಸ್ಥಾನದಲ್ಲಿ ಉಳಿಯಬಾರದು, ರಾಜೀನಾಮೆ ನೀಡಬೇಕು. ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಸರಕಾರ ಲಘುವಾಗಿ ಪರಿಗಣಿಸಿದೆ. ಪಿಎಳ್‌ಐ ಸಂಘಟನೆಗಳ ಮೇಲಿನ 153 ಕೇಸ್‌ ವಾಪಸ್‌ ಪಡೆಯಲಾಗಿದೆ. ರಾಮೇಶ್ವರ ಕೆಫೆಗೆ ಹೋದ ಮಹಿಳೆಯರಿಗೆ ಮಾರಣಾಂತಿಕ ಗಾಯವಾಗಿದೆ. ಈ ಕಾಂಗ್ರೆಸ್ ಸರ್ಕಾರ ಭಂಡರು, ಪುಂಡ ಪೋಕರಿಗೆ ಅಧಿಕಾರ ಕೊಟ್ಟಿದೆʼʼ ಎಂದು ಮಂಜುಳಾ ಅವರು ಹೇಳಿದ್ದಾರೆ.

ʼಕಡಬದಲ್ಲಿ ಮೂವರು ಯುವತಿಯರ ಮೇಲೆ ಆಸಿಡ್‌ ಹಾಕಲಾಗಿದೆ. ಕೇರಳದಿಂದ ಬಂದವನು ಇಲ್ಲಿ ದಾಳಿ ಮಾಡಿದ್ದಾನೆ. ಕೇರಳದವರಿಗೆ ಇಲ್ಲಿ ಯಾಕೆ ರೆಡ್‌ಕಾರ್ಪೆಟ್‌ ಹಾಸಲಾಗುತ್ತಿದೆ? ಮಹಿಳಾ ಆಯೋಗ ಸ್ಥಳಕ್ಕೆ ಹೋಗಿ ವಿಚಾರಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಏನು ಮಾಡ್ತಿದ್ದಾರೆ? ನಿಮಗೆ ಕೆಲಸ ಮಾಡಲು ಆಗಲ್ಲ ಅಂದ್ರೆ ಬಿಟ್ಟು ಹೋಗಿ. ನಿಮ್ಮ ಪುರುಷ ಸಚಿವರು ಕೆಲಸ ಮಾಡಲು ಬಿಡದಿದ್ದರೆ ಹೊರಗೆ ಬನ್ನಿʼ ಎಂದು ಮಂಜುಳಾ ಅವರು ವಾಗ್ದಾಳಿ ಮಾಡಿದ್ದಾರೆ.

You may also like

Leave a Comment