Home » Dakshina Kannada: ʼಸಕಾಲ,ʼ ʼಪೋಡಿʼ ಅರ್ಜಿ ವಿಲೇವಾರಿ: ದ.ಕ. ನಂ.1

Dakshina Kannada: ʼಸಕಾಲ,ʼ ʼಪೋಡಿʼ ಅರ್ಜಿ ವಿಲೇವಾರಿ: ದ.ಕ. ನಂ.1

0 comments

Dakshina Kannada: ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರಗಳ ಸೇವೆಗಳನ್ನು ತ್ವರಿತ ರೀತಿಯಲ್ಲಿ ಮಾಡುವಲ್ಲಿ ರಾಜ್ಯಕ್ಕೆ 2 ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈಗ ʼಸಕಾಲʼ ಯೋಜನೆ ಹಾಗೂ ʼಪೋಡಿʼ ಅರ್ಜಿ ವಿಲೇವಾರಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ.

ಕಂದಾಯ ಇಲಾಖೆಯ ಮಾಹಿತಿಯ ಅನುಸಾರ ಕಳೆದ ಮಾರ್ಚ್‌ ತಿಂಗಳಲ್ಲಿ ಸಕಾಲದಲ್ಲಿ ಅರ್ಜಿ ವಿಲೇವಾರಿಯಲ್ಲಿ ದ.ಕ.ಜಿಲ್ಲೆ ಪ್ರಥಮ ಸಾಧನೆ ಮಾಡಿದೆ.

ಪೋಡಿ (1 ರಿಂದ 5 ಪ್ರಕರಣ) ಕಾರ್ಯಕ್ರಮದಲ್ಲೂ ದ.ಕ.ಜಿಲ್ಲೆ ಅಗ್ರ ಸ್ಥಾನ ಪಡೆದಿದೆ. ಎಪ್ರಿಲ್‌ 6 ರವರೆಗಿನ ಅಂಕಿ ಅಂಶ ಪ್ರಕಾರ ಪೋಡಿ (ಜಾಗದ ಅಳತೆಗೆ) ಕಾರ್ಯದಲ್ಲೂ ದ.ಕ. ಅಗ್ರ ಸ್ಥಾನ ಪಡೆದಿದೆ. ಪೋಡಿ ಕಾರ್ಯದಲ್ಲಿ ದ.ಕ. ಹೊರತುಪಡಿಸಿ ಹಾಸನ ದ್ವಿತೀಯ. ಕಲಬುರಗಿ ತೃತೀಯ ಸ್ಥಾನ ಪಡೆದುಕೊಂಡಿದೆ. ಜಿಲ್ಲಾಡಳಿತದ ಕಾರ್ಯದಕ್ಷತೆಯ ಕೆಲಸದಿಂದ ದ.ಕ. ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ಸಾಧ್ಯವಾಗಿದೆ.

 

You may also like