Home » Dakshina Kannada: ಭಾರೀ ಮಳೆಗೆ ವಾಮಂಜೂರು ಕೆತ್ತಿಕಳ್ ರಸ್ತೆ ಗುಡ್ಡ ಕುಸಿತ

Dakshina Kannada: ಭಾರೀ ಮಳೆಗೆ ವಾಮಂಜೂರು ಕೆತ್ತಿಕಳ್ ರಸ್ತೆ ಗುಡ್ಡ ಕುಸಿತ

0 comments

Dakshina Kannada: ದಕ್ಷಿಣಕನ್ನಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ನೀರು ಶೇಖರಣೆಗೊಂಡು ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ವಾಮಂಜೂರು ಸಮೀಪದ ಕತ್ತಿಕಲ್‌ ನ ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕ ಹೊಂದಿರುವ ರಾಷ್ಟ್ರೀಯ ಹೆದ್ದಾರಿ 169 ರ ರಸ್ತೆ ಅಭಿವೃದ್ಧಿಗಾಗಿ ಕಾಮಗಾರಿ ನಡೆದ ಸ್ಥಳದಲ್ಲಿ ಗುಡ್ಡಕುಸಿತ ಉಂಟಾಗಿದೆ.

ವಾಮಂಜೂರಿನಿಂದ ಗುರುಪುರದ ಕಡೆಗೆ ಹೋಗುವ ಒಂದು ಭಾಗದಲ್ಲಿ ಗುಡ್ಡ ಕುಸಿದಿರುವ ವಿಡಿಯೋ ವೈರಲ್‌ ಆಗಿದೆ. ಇಲ್ಲಿ ಇದೀಗ ಸಂಚಾರವನ್ನು ನಿಷೇಧ ಮಾಡಲಾಗಿದೆ. ಹಾಗೂ ಸಾಯಿಲ್‌ ನೈಲಿಂಗ್‌ ಮಾಡಿದ್ದರೂ ಈ ಭಾಗದಲ್ಲಿ ಗುಡ್ಡ ಕುಸಿದಿದ್ದು, ಜನರಲ್ಲಿ ಪ್ರಶ್ನೆಯನ್ನು ಮೂಡಿಸಿದೆ.

ಸದ್ಯ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಇನ್ನು ಗುಡ್ಡ ಕುಸಿದಿರುವ ಜಾಗದಲ್ಲಿ ಮರಗಳ ಜೊತೆಗೆ ಮತ್ತೆ ಮಣ್ಣು ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

You may also like