4
Kadaba: ಅನಾರೋಗ್ಯದಿಂದಾಗಿ ಯುವತಿಯೋರ್ವಳು ಮೃತಪಟ್ಟ ಕುರಿತು ವರದಿಯಾಗಿದೆ. ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕರವರ ಪುತ್ರಿ ತೃಪ್ತಿ ಮೃತ ಯುವತಿ.
ಇವರು ಸುಬ್ರಹ್ಮಣ್ಯ ಪದವಿ ಕಾಲೇಜಿನಲ್ಲಿ ಕಲಿಯುತ್ತಿದ್ದಳು ಎಂದು ವರದಿಯಾಗಿದೆ. ತೃಪ್ತಿ ಎರಡು ದಿನಗಳಿಂದ ಅನಾರೋಗ್ಯದಿಂದ ಇದ್ದು, ಆಕೆಯನ್ನು ನಿನ್ನೆ ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವತಿ ನಿನ್ನೆ ಮೃತ ಹೊಂದಿರುವುದಾಗಿ ವರದಿಯಾಗಿದೆ.
