Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಕುರಿತಂತೆ ದಿಗಂತ್ ಸಹೋದರ ಪವನ್ ಟಿವಿ9 ಗೆ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮಂಗಳ ಮುಖಿಯರ ಜೊತೆ ಹೋಗಿರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡದ ಎಸ್‌ಐ ಜೊತೆ ಮಾತನಾಡಿದ್ದೇನೆ. ಈ ಕುರಿತು ಮಾಹಿತಿ ಇದೆಯಾ ಎಂದು ವಿಚಾರಣೆ ಮಾಡಿದೆ. ಅದಕ್ಕೆ ಅವರು ಈ ಕುರಿತು ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು. ಜನ ಆ ರೀತಿ ಹೇಳುತ್ತಿದ್ದಾರೆ ಅಂದ್ರು. ಸುಳ್ಳು ಸುದ್ದಿಯಾಗಿರಬಹುದು. ಆದರೆ ಆತನ ವರ್ತನೆಯಲ್ಲಿ ಬದಲಾವಣೆ ಆಗಿರುವುದು ನಮಗೆ ಕಂಡು ಬಂದಿಲ್ಲ ಎಂದು ಟಿವಿ9 ಮಾಧ್ಯಮಕ್ಕೆ ಪವನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಸ್ನೇಹಿತರ ಜೊತೆ ಮೆಸೇಜ್, ತಡರಾತ್ರಿ ವರೆಗೆ ಮೊಬೈಲ್‌ನಲ್ಲಿ ಗೇಮ್ಸ್ ಆಡುತ್ತಿದ್ದ. ಇದು ಟೀನೇಜ್‌ನಲ್ಲಿಸಹಜ ಎಂದು ನಾವು ತಿಳಿದುಕೊಂಡಿದ್ದೆವು.
ಸಿಸಿ ಕ್ಯಾಮೆರಾ ಫರಂಗಿಪೇಟೆಯಲ್ಲಿ ಕಡಿಮೆಯಿದೆ. ಶ್ವಾನದಳ 48 ಗಂಟೆಗಳ ಬಳಿಕ ಬಂತು. ಆರು ಗಂಟೆ ಬಳಿಕ ಶ್ವಾನ ಬಂದರೆ ವಾಸನೆ ಗ್ರಹಿಕೆ ಮಾಡುವುದು ಸಾಧ್ಯವಾಗುವುದಿಲ್ಲ. ಶ್ವಾನ ಬಂದರೂ ಕೂಡಾ ಏನೂ ಪ್ರಯೋಜನ ಇಲ್ಲ. 24 ಗಂಟೆಯೊಳಗೆ ಹುಡುಕಾಟ ಆರಂಭ ಮಾಡಿದ್ದರೆ ಏನಾದರೂ ತಿಳಿಯುತ್ತಿತ್ತು. ನಮ್ಮ ಬೆಂಬಲ ಹಿಂದೂ ಹೋರಾಟಕ್ಕೆ ಇದೆ. ತನಿಖೆಯಲ್ಲಿ ಬೆಳವಣಿಗೆ ಇಲ್ಲದಾಗ ಇನ್ನಷ್ಟು ಒತ್ತಡ ಹಾಕಬೇಕಿದೆ ಎಂದು ಟಿವಿ9 ಮಾಧ್ಯಮಕ್ಕೆ ಪವನ್ ಹೇಳಿದ್ದಾರೆ.
