Bantwala: ಬಂಟ್ವಾಳ ಬಿ ಸಿ ರೋಡ್ ನಲ್ಲಿ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ಯಕ್ಷಗಾನ ವೇಷಧಾರಿಯೊಬ್ಬರಿಗೆ ರಸ್ತೆಯಲ್ಲಿ ಯಕ್ಷಗಾನ ವೇಷಭೂಷಣ (Yakshagana Costume) ನ್ನು ತೊಟ್ಟಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಸರಾ ಸಮಯವಾದುದರಿಂದ ವಿವಿಧ ರೀತಿಯ ವೇಷಭೂಷಣಗಳನ್ನು ತೊಟ್ಟು ಕಲಾವಿದರು ರಸ್ತೆಯಲ್ಲಿ ತಿರುಗಾಡುವುದು ದಕ್ಷಿಣ ಕನ್ನಡ ಭಾಗದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಶನಿವಾರ ಬಿ.ಸಿ.ರಸ್ತೆಯ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನ ಕಲಾವಿದರ ವೇಷ ಧರಿಸಿ ನಿಂತಿದ್ದು, ಇದನ್ನು ಕಂಡ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವ್ಯಕ್ತಿಯ ಮೇಲೆ ಸಿಟ್ಟಾಗಿದ್ದಾರೆ. ಹಾಗೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ವೀಡಿಯೋ ಸೆರೆಯಾಗಿದ್ದು, ಎಲ್ಲಾ ಕಡೆ ವೈರಲ್ ಆಗಿದೆ.
ಇದನ್ನು ಓದಿ: ಕಾರ್ಕಳದ ಧರ್ಮ ಸಂರಕ್ಷಣಾ ಸಭೆ ಬಗ್ಗೆ ತೀವ್ರ ಬೇಸರಪಟ್ಟ ವಜ್ರದೇಹಿ ಸ್ವಾಮೀಜಿ; ಅ. 29ರ ಯಾತ್ರೆಗೆ ನಾಯಕರೇ ಸಿಗ್ತಿಲ್ಲ
