ಧರ್ಮಸ್ಥಳ: ಧರ್ಮಸ್ಥಳದಲ್ಲಿ ಮೊನ್ನೆ ನಡೆದ ಯುಟ್ಯೂಬ್ ಮಾಧ್ಯಮದವರ ಮೇಲೆ ಧರ್ಮಸ್ಥಳದ ಗ್ಯಾಂಗ್ ನಿoದ ಹಲ್ಲೆಗೊಳಗಾಗಿ ಇದೀಗ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಯೂಟ್ಯೂಬ್ ಪತ್ರಕರ್ತರ ಸಹಿತ ಇನ್ನಿತರ ಯೂಟ್ಯೂಬರ್ಸ್ ಗಳನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಳ್ತಂಗಡಿ ತಾಲೂಕು ಘಟಕ ಹಾಗೂ ಮೈಸೂರು ವಿಭಾಗಿಯ ಸಂಘಟನೆಗಳ ಮುಖಂಡರು ಜಂಟಿಯಾಗಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ತೀವ್ರವಾಗಿ ಹಲ್ಲೆಗೂಳಗಾದ ದಲಿತ ಯುಟ್ಯೂಬ್ ಪತ್ರಕರ್ತ ಹಾಸನದ ಚನ್ನರಾಯಪಟ್ಟಣದ ಅಭಿಷೇಕ್ ಸೇರಿದಂತೆ ಇತರ ಯೂಟ್ಯೂಬ್ ಪತ್ರಕರ್ತರ ಸ್ಥಿತಿಯನ್ನು ತಿಳಿದ ದಲಿತ ಸಂಘಟನೆಗಳ ನಿಯೋಗದ ಮುಖಂಡರು ದ ತೀವ್ರ ಬೇಸರ ಮತ್ತು ಅಚ್ಚರಿಗೊಳಗಾದರು.
ಈ ವೇಳೆ ದಲಿತ ಸಂಘಟನೆಯ ಮುಖಂಡರು ಮಾತನಾಡುತ್ತಾ ಯೂಟ್ಯೂಬ್ ಪತ್ರಕರ್ತರ ಮೇಲಿನ ದಾಳಿ ಸಂವಿಧಾನದ ಮೇಲಿನ ದಾಳಿಯಾಗಿದ್ದು ಸರ್ಕಾರ ಮತ್ತು ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದಲಿತ ಪತ್ರಕರ್ತ ಸೇರಿದಂತೆ ಇತರ ಯೂಟ್ಯೂಬರ್ಗಳ ಮೇಲೆ ಹಲ್ಲೆ , ದಲಿತ ದೌರ್ಜನ್ಯ, ಜಾತಿನಿಂದನೆ, ಕೊಲೆ ಯತ್ನ, ದರೋಡೆ, ವಾಹನ ಹಾಗೂ ಇತರ ಅಮೂಲ್ಯ ವಸ್ತುಗಳ ಜಖಂಗೊಳಿಸಿದರ ಹಾಗೂ ಇನ್ನಿತ್ಯಾದಿ ಪ್ರಕರಣಗಳ ಕೇಸು ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಸಚಿವರು, ಮಂತ್ರಿಗಳು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಒತ್ತಾಯಿಸಿದರು. ಒಂದು ವೇಳೆ ಆರೋಪಿಗಳ ವಿರುದ್ಧ ವಿರುದ್ಧಾಕ್ಷಿಣ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿಆ ಬಲಾಡ್ಯರ ದುಷ್ಟ ಕೂಟ ಇನ್ನಷ್ಟು ದುರಹಂಕಾರದ ದುರ್ವರ್ತನೆಗಳನ್ನು ತೋರಿಸಬಹುದೆಂದು ಅವರು ಎಚ್ಚರಿಸಿದ್ದಾರೆ.
ದಸಂಸ ನಿಯೋಗದಲ್ಲಿ ಶೇಖರ್ ಕುಕ್ಕೇಡಿ, ಬಿ,ಕೆ ವಸಂತ, ರಮೇಶ್, ವೆಂಕಣ್ಣ ಕೊಯ್ಯುರು, ನೇಮಿರಾಜ ಕೊಲ್ಲೂರು, ಶ್ರೀಧರ್ ಕಳ೦ಜ, ಶಂಕರ್ ಮಾಲಾಡಿ, ನಲ್ಕೆ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಭಾಕರ ನಲ್ಕೆ, ಹರೀಶ್ ಲಾಯ್ಲ, ಕೂಸ ಅಳದಂಗಡಿ, ಸುಂದರ ನಾಲ್ಕೂರು, ಪುಷ್ಪರಾಜ್ ಶಿರ್ಲಾಲು, ಸಂದೀಪ್ ಹೊಸಪಟ್ಟಣ, ಶೇಖರ ಮಾಲಾಡಿ, ರಮೇಶ ಗಾಂಧಿನಗರ ಮೊದಲಾದವರಿದ್ದರು.
Bengaluru : ‘ಮತ ಕಳ್ಳತನ’ ಆರೋಪ – ಮಹದೇವಪುರದ 10 ಚದುರಡಿ ರೂಮಿನಲ್ಲಿ 80 ಮತದಾರರು ಇರುವುದು ನಿಜವೇ?
