Home » ಮಂಗಳೂರು: ದೈವ ನರ್ತಕನ ಚಿಕಿತ್ಸೆಗೆ ದಲಿತ ಸೇವಾ ಸಮಿತಿ ವತಿಯಿಂದ ಸಹಾಯಧನ ವಿತರಣೆ

ಮಂಗಳೂರು: ದೈವ ನರ್ತಕನ ಚಿಕಿತ್ಸೆಗೆ ದಲಿತ ಸೇವಾ ಸಮಿತಿ ವತಿಯಿಂದ ಸಹಾಯಧನ ವಿತರಣೆ

0 comments

ಮಂಗಳೂರು: ದೇರಲಕಟ್ಟೆಯ ನಿಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಸಿದ್ಧ ದೈವ ನರ್ತಕ ದಕ ಜಿಲ್ಲೆ ಬಂಟ್ವಾಳ ತಾಲೂಕಿನ ಕಾವಳ ಕಟ್ಟೆಯ ನೆಲ್ಲಿಗುಡ್ಡೆ ನಿವಾಸಿ ಕೃಷ್ಣಪ್ಪ ನಲ್ಕೆಯವರ ಚಿಕಿತ್ಸಾ ನೆರವಿಗಾಗಿ ದಲಿತ ಸೇವಾ ಸಮಿತಿಯ ವತಿಯಿಂದ ಸಹಾಯಧನವನ್ನು ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಬಿ.ಕೆ ಸೇಸಪ್ಪ ಬೆದ್ರಕಾಡು ಅವರ ನೇತೃತ್ವದ ತಂಡ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಹಸ್ತಾಂತರಿಸಲಾಯಿತು.

ತೀರಾ ಅನಾರೋಗ್ಯಕ್ಕೆ ಒಳಗಾಗಿ ಇದೀಗ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿ ರುವ ಇವರ ತುರ್ತು ಚಿಕಿತ್ಸಾ ವೆಚ್ಚ ಬರಿಸಲು ಅವರ ಕುಟುಂಬಕ್ಕೆ ಕಷ್ಟ ಸಾಧ್ಯವಾಗಿತ್ತು.

ಹೀಗಾಗಿ ತೀರಾ ಬಡ ಕುಟುಂಬದವರಾಗಿದ್ದು ತುರ್ತು ಚಿಕಿತ್ಸೆ ಕೊಡಿಸಲು ಆರ್ಥಿಕ ಸಂಕಷ್ಟದಲ್ಲಿರುವ ಇವರ ಚಿಕಿತ್ಸೆಗೆ ನೆರವಾಗಬೇಕೆಂದು ಹೊಸ ಕನ್ನಡ ವಾರಪತ್ರಿಕೆ ಹಾಗೂ ಹೊಸ ಕನ್ನಡ ವೆಬ್ಸೈಟ್ ಪತ್ರಿಕೆ ಹಾಗೂ ಬೆಳ್ತಂಗಡಿಯ ಆಪತ್ಬಾಂಧವ ಸೇವಾದಳ ಸಹೃದಯರಲ್ಲಿ ಮನವಿ ಮಾಡಿಕೊಂಡಿತ್ತು. ಇದರಂತೆ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿ ಬಂದ ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸೇಸಪ್ಪ ಬೆದ್ರಕಾಡು ಹಾಗೂ ಸಮಿತಿಯ ಪದಾಧಿಕಾರಿಗಳು ಮಾಹಿತಿ ಪಡೆದುಕೊಂಡು ಸೋಮವಾರ ಸಮಿತಿಯ ವತಿಯಿಂದ ಕೃಷ್ಣಪ್ಪ ನಲ್ಕೆಯವರ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯ ಧನವನ್ನು ಅವರ ಅವರ ಪತ್ನಿಗೆ ಹಸ್ತಾಂತರಿಸಲಾಯಿತು.

ಈ ವೇಳೆ ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಬಿ ಕೆ ಸೇಸಪ್ಪ ಬೆದ್ರಕಾಡು, ಎ.ಐ.ಎಂ.ಎಸ್ ಡಿಗ್ರಿ ಕಾಲೇಜಿನ ಉಪಾಧ್ಯಕ್ಷರೂ, ಉಪನ್ಯಾಸಕರೂ, ಸಾಹಿತಿ, ಸಂಶೋಧಕ, ಸಿನಿಮಾ ನಿರ್ದೇಶಕರೂ ಆದ ಬಿ.ಎ.ಲೋಕಯ್ಯ ಶಿಶಿಲ, ಹೊಸ ಕನ್ನಡ ವಾರಪತ್ರಿಕೆ ಹಾಗೂ ವೆಬ್ ಪತ್ರಿಕಾ ಸಂಪಾದಕರಾದ ಸಮಾಜ ಸೇವಕ ಉದಯ್ ಕುಮಾರ್ ಮತ್ತು ಬೆಳ್ತಂಗಡಿಯ ಆಪತ್ಬಾಂಧವ ಸೇವಾದಳದ ಸಂಚಾಲಕರಾದ ರಫೀಕ್ ಸವಣಾಲು ಉಪಸ್ಥಿತರಿದ್ದರು.

ಇದನ್ನೂ ಓದಿ: Honey trap: ಬೈಲುಕುಪ್ಪೆ ಹನಿಟ್ರ್ಯಾಪ್ ಪ್ರಕರಣ -ತಲೆಮಾರೆಸಿಕೊಂಡಿದ್ದ ಪ್ರಮುಖ ಇಬ್ಬರು ಆರೋಪಿಗಳ ಬಂಧನ

You may also like