8
Udupi: ಕರ್ನಾಟಕ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನ ರಾಂ ಪ್ರಶಸ್ತಿಗೆ ಕರಾವಳಿಯ ದಲಿತ ಚಿಂತಕ, ಸಾಮಾಜಿಕ ಹೋರಾಟಗಾರರಾದ ಜಯನ್ ಮಲ್ಪೆ ಅವರನ್ನು ಆಯ್ಕೆ ಮಾಡಿ ಘೋಷಿಸಿದೆ.
ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ನಾಳೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ, ಜನಸಿರಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಈಗಾಗಲೇ ಸಂದಿದೆ.
