Home » Pratham Case: ನಟ‌ ಪ್ರಥಮ್ ಮೇಲೆ‌ ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಪ್ರಕರಣ – ಸಾಕ್ಷಿಗಳಿಗೆ ಹಾಗೂ ಆರೋಪಿಗಳಿಗೆ ಪೊಲೀಸರಿಂದ ನೋಟಿಸ್

Pratham Case: ನಟ‌ ಪ್ರಥಮ್ ಮೇಲೆ‌ ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಪ್ರಕರಣ – ಸಾಕ್ಷಿಗಳಿಗೆ ಹಾಗೂ ಆರೋಪಿಗಳಿಗೆ ಪೊಲೀಸರಿಂದ ನೋಟಿಸ್

0 comments

Pratham Case: ನಟ‌ ಪ್ರಥಮ್ ಮೇಲೆ‌ ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಪ್ರಕರಣ ಸಂಬಂಧ ಸಾಕ್ಷಿಗಳಿಂದ ಮಾಹಿತಿ ಪಡೆಯಲು ಪೊಲೀಸರು ನೋಟಿಸ್ ನೀಡಿರುವ ಬಗ್ಗೆ ವರದಿಯಾಗಿದೆ. ದೂರುದಾರ ಪ್ರಥಮ್ ಮತ್ತು ತೋಟದ ಮಾಲೀಕ ಮಹೇಶ್ ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಇಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಹಲ್ಲೆಗೆ ಯತ್ನ ಬೆದರಿಕೆ ಹಾಕಿದ‌ ದಿನ ನಡೆದ‌ ಘಟನೆ‌ ಬಗ್ಗೆ ಪೊಲೀಸರು ಮಾಹಿತಿ ಪಡೆಯಲಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಇನ್ಸಪೇಕ್ಟರ್ ಸಾಧಿಕ್ ಪಾಷರಿಂದ ವಿಚಾರಣೆ ನಡೆಯಲಿದ್ದು, ವಿಚಾರಣೆ ನಂತರ ಆರೋಪಿಗಳ‌ ವಿಚಾರಣೆಯನ್ನು ಪೊಲೀಸರು‌ ನಡೆಸಲಿದ್ದಾರೆ. ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಲಿರುವ ಪ್ರಥಮ್ ಹಾಗೂ ಮಹೇಶ್ ಅವರನ್ನು ಪ್ರತ್ಯೇಕವಾಗಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಇನ್ನು ನಟ ಪ್ರಥಮ್ ಗೆ ಡ್ಯಾಗರ್ ಹಿಡಿದು ಜೀವ ಬೆದರಿಕೆ ಪ್ರಕರಣ ಸಂಬಂಧ ಡ್ಯಾಗರ್ ಹಿಡಿದು ಬೆದರಿಕೆ ಹಾಕಿದವರಿಗೂ ಪೊಲೀಸರು ನೋಟಿಸ್ ಅನ್ನು ನೀಡಿದ್ದಾರೆ. ರೌಡಿ ಶೀಟರ್ ಗಳಾದ ಬೇಕರಿ ರಘು ಮತ್ತು ಯಶಸ್ವಿನಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ದೊಡ್ಡಬಳ್ಳಾಪುರ ಠಾಣೆ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ದೇವಸ್ಥಾನದ ಪ್ರೋಗ್ರಾಂ ಗೆ ಹೋಗುವ ವೇಳೆ ಪ್ರಥಮ್ ಗೆ ಬೆದರಿಕೆ ಒಡ್ಡಿದ್ದರು ಎಂಬ ಆರೋಪ ಇದ್ದು, ಅಲ್ಲಿಂದ ಕರೆದೊಯ್ದು ಡ್ಯಾಗರ್ ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಈ ಸಂದರ್ಭ ಜೈಲಲ್ಲಿ ದರ್ಶನ್ ಜೊತೆಗಿದ್ದ ಫೋಟೊ ತೋರಿಸಿ ಬೇಕರಿ ರಘು ಬೆದರಿಕೆ ಹಾಕಿದ್ದಾನೆ ಎಂದು ಕಂಪ್ಲೆಂಟ್ ನಲ್ಲಿ ಪ್ರಥಮ್ ಹೇಳಿದ್ದರು. ಪ್ರಥಮ್ ದೂರು ನೀಡಿದ ಬೆನ್ನಲ್ಲೇ ಎಫ್ ಐ ಆರ್ ದಾಖಲಾದ ಕೂಡಲೆ ಎ1 ಹಾಗು ಎ2 ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಪೊಲೀಸರು ಬುಲಾವ್ ನೀಡಿದ್ದಾರೆ.

ಇದನ್ನೂ ಓದಿ: Youtube: ಇನ್ನು ಮುಂದೆ ಹದಿಹರೆಯದವರಿಗೆ ಈ ದೇಶದಲ್ಲಿ ಸಾಮಾಜಿಕ ಮಾಧ್ಯಮವನ್ನು ಸಂಪೂರ್ಣವಾಗಿ ನಿಷೇಧ

You may also like