Home » Darshan Thoogudeepa: ರೇಣುಕಾಸ್ವಾಮಿ ಕುಟುಂಬಕ್ಕೆ ಪ್ರತಿ ತಿಂಗಳು 10 ಲಕ್ಷ ರೂಪಾಯಿ ನೀಡಲಿರುವ ದರ್ಶನ್?!

Darshan Thoogudeepa: ರೇಣುಕಾಸ್ವಾಮಿ ಕುಟುಂಬಕ್ಕೆ ಪ್ರತಿ ತಿಂಗಳು 10 ಲಕ್ಷ ರೂಪಾಯಿ ನೀಡಲಿರುವ ದರ್ಶನ್?!

0 comments
Darshan Thoogudeepa

Darshan Thoogudeepa: ದರ್ಶನ್ ಅಭಿಮಾನಿಗಳ ಪ್ರಕಾರ, ಕಷ್ಟ ಅಂತಾ ಬಂದ್ರೆ ದರ್ಶನ್ ದಾನ ಶೂರ ಕರ್ಣ. ಅವರು ಮಾಡಿರುವ ಸಹಾಯವನ್ನ ಕೋಟಿ ಕೋಟಿ ರೂಪಾಯಿಗಳಲ್ಲಿ ಲೆಕ್ಕ ಹಾಕಲು ಆಗಲ್ಲ. ಅದರಲ್ಲೂ ದರ್ಶನ್ ತೂಗುದೀಪ್ (Darshan Thoogudeepa) ಎದುರು ಬಂದು ಸಹಾಯ ಕೇಳುತ್ತಿದ್ದ ಯಾರನ್ನೂ ಬರಿಗೈನಲ್ಲಿ ಕಳುಹಿಸಿಲ್ಲ ಎಂಬುದಾಗಿ ಫ್ಯಾನ್ಸ್ ಹೇಳ್ತಾರೆ. ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರಂತೆ, ರೇಣುಕಾಸ್ವಾಮಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪ್ರತಿ ತಿಂಗಳು ನೀಡಲಿದ್ದಾರೆ ಎಂದು ಸುದ್ದಿ ಆಗಿದೆ.

ಇಂತಹ ಉತ್ತಮ ಮನಸಿನ ದರ್ಶನ್ ತೂಗುದೀಪ್ ಅವರನ್ನ ಬಳ್ಳಾರಿ ಜೈಲಿನಿಂದ ರಿಲೀಸ್ ಮಾಡಿಸಿಕೊಂಡು ಬರಲೇ ಬೇಕು & ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಸಂಪೂರ್ಣವಾಗಿ ದರ್ಶನ್ ತೂಗುದೀಪ್ ಹೊರಗೆ ಬರಬೇಕು ಎಂಬುದು ಅಭಿಮಾನಿಗಳ ಆಸೆ.

ಇನ್ನು, ರೇಣುಕಾಸ್ವಾಮಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪ್ರತಿ ತಿಂಗಳು ನೀಡಲು ಒಪ್ಪಿಗೆಯನ್ನೂ ನೀಡಿದ್ದಾರಂತೆ. ಈ ಬಗ್ಗೆ ಬಳ್ಳಾರಿ ಜೈಲಿಗೆ ಹೊದಾಗ ದರ್ಶನ್ ತೂಗುದೀಪ್ ತಮ್ಮ ಕುಟುಂಬ ಸದಸ್ಯರ ಜೊತೆಗೆ ಮಾತನಾಡಿದ್ದು, ಇನ್ನೇನು ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ಹೊರಗೆ ಬಂದ ತಕ್ಷಣ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಮುಖ್ಯವಾಗಿ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದಾಗ ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಹಣ ಪ್ರತಿ ತಿಂಗಳು ನೀಡುವ ಮಾತು ಕೊಡುತ್ತಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹೇಳ್ತಿದ್ದಾರೆ. ಆದ್ರೆ ಈ ಬಗ್ಗೆ ಈವರೆಗೂ ನಟ ದರ್ಶನ್ ತೂಗುದೀಪ್ ಅವರ ಕುಟುಂಬ ಸ್ಪಷ್ಟನೆ ನೀಡಿಲ್ಲ ಅಥವಾ ಅಧಿಕೃತ ಹೇಳಿಕೆ ನೀಡಿಲ್ಲ.

ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಹೊರಗೆ ಬರುವ ಬಗ್ಗೆ ಕೂಡ ಚರ್ಚೆ ಜೋರಾಗಿದೆ. ಅದರಲ್ಲೂ ಮಂಗಳವಾರವೇ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿದ್ದಾರೆ ಎಂದು ಅಭಿಮಾನಿಗಳು ಬಲವಾಗಿ ನಂಬಿಕೊಂಡಿದ್ದಾರೆ.

You may also like

Leave a Comment