Home » Darshan: ಶೀಘ್ರದಲ್ಲೇ ಜೈಲಿನಿಂದ ಹೊರ ಬರಲಿದ್ದಾರೆ ದರ್ಶನ್ !! ಸಿಕ್ಕೇಬಿಡ್ತು ನೋಡಿ ಗ್ರೀನ್ ಸಿಗ್ನಲ್ !!

Darshan: ಶೀಘ್ರದಲ್ಲೇ ಜೈಲಿನಿಂದ ಹೊರ ಬರಲಿದ್ದಾರೆ ದರ್ಶನ್ !! ಸಿಕ್ಕೇಬಿಡ್ತು ನೋಡಿ ಗ್ರೀನ್ ಸಿಗ್ನಲ್ !!

0 comments
Darshan

Darshan: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಆರೋಪಿ ಸ್ಥಾನದಲ್ಲಿರುವ ಕನ್ನಡ ನಟ ದರ್ಶನ್ (Actor Darshan) ಜೈಲು (Jail) ಸೇರಿದ್ದು, ದರ್ಶನ್ ಅರೆಸ್ಟ್ ಆಗಿರುವುದಕ್ಕೆ ತಮ್ಮ ಅಭಿಮಾನಿಗಳು, ಹಿತೈಷಿಗಳು ಅವರ ಬಿಡುಗಡೆಗೆ ಪರಿತಪಿಸುತ್ತಿದ್ದಾರೆ. ಹೀಗಿರುವಾಗ ಶೀಘ್ರವೇ ಜೈಲಿನಿಂದ ದರ್ಶನ್ ಹೊರ ಬರ್ತಾರೆ ಎಂದು ದೇವರು ಸೂಚನೆ ಕೊಟ್ಟಿದ್ದಾರೆ ಅನ್ನೋ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

Darshan: ವಿಶ್ವಕಪ್ ಗೆದ್ದ ಟೀಂ ಇಂಡಿಯಾ, ಆದ್ರೆ ದರ್ಶನ್ ಗೆ ಥ್ಯಾಂಕ್ಸ್ ಹೇಳಿದ ಕ್ರಿಕೆಟ್ ಪ್ರೇಮಿಗಳು – ಇದು ಎಲ್ಲಿಂದೆಲ್ಲಿಗೆ ಸಂಬಂಧವಯ್ಯಾ ?!

ಹೌದು, ದರ್ಶನ್ ಜೈಲಿಂದ ರಿಲೀಸ್ ಆಗೋದು ಯಾವಾಗ ಎನ್ನುವ ಪ್ರಶ್ನೆಗೆ  ದೇವರೇ ಉತ್ತರ ಕೊಟ್ಟಿದ್ದಾರಂತೆ! ಮಾಹಿತಿ ಪ್ರಕಾರ, ದರ್ಶನ್ ಜೈಲಿನಿಂದ ಬಿಡುಗಡೆಯಾಗೋ ಕುರಿತು ಭಕ್ತರೊಬ್ಬರು ಬೇಡಿಕೊಂಡ ಪ್ರಶ್ನೆಗೆ ದೇವರು ಹೂವಿನ ಪ್ರಸಾದ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಸಾಕ್ಷಿಯಾಗಿ ಈ ವಿಡಿಯೋ ಇದೀಗ  ಎಲ್ಲೆಡೆ ಹರಿದಾಡಿದೆ.

ಈ ವಿಡಿಯೋದಲ್ಲಿ ದೇವರ ಮುಂದೆ ಅರ್ಚಕರೊಬ್ಬರು ಭಕ್ತಿಯಿಂದ, ಒಬ್ಬ ಕಲಾವಿದರು, ಒಂದು ತೊಂದ್ರೆಯಲ್ಲಿ ಸಿಕ್ಕಾಕೊಂಡಿದ್ದಾರೆ. ಅವರ ಹೆಸ್ರು ದರ್ಶನ್ ಅಂತ, ಅವ್ರು ತಪ್ಪು ಮಾಡಿರ ಬಹುದು, ಮಾಡದೇ ಇರಬಹುದು, ಆದಷ್ಟು ಬೇಗ, ಅವ್ರ ಮೇಲೆ ಏನೇ ಆರೋಪಗಳಿದ್ದರೂ ಆದಷ್ಟು ಬೇಗ ಅದನ್ನೆಲ್ಲ ನಿವಾರಣೆ ಮಾಡಿ, ಅವರಿಗೆ ಯಾವುದೇ ತೊಂದರೆ ಆಗದಂತೆ ಅಭಿಮಾನಿಗಳು ಅವ್ರ ಜೊತೆ ಸೇರುತ್ತಾರೆ ಅಂತಾದ್ರೆ ನಿನ್ನ ಆಶೀರ್ವಾದ ಇದ್ದು ನೀ ನಡೆಸ್ಕೊಟ್ಟು ಆದಷ್ಟು ಬೇಗ ಕೈಗೂಡಿಸಿ ಕೊಡ್ತೀನಿ ಅನ್ನೋದಾದ್ರೆ ನೀ ಆಶೀರ್ವಾದ ಮಾಡು ಅಂತ ಕೇಳಿಕೊಳ್ಳುತ್ತಾರೆ.

ಇಷ್ಟಾಗುತ್ತಿದ್ದಂತೆ ದೇವರ ಮೂರ್ತಿಯಿಂದ ಹೂವಿನ ಮಾಲೆಯೂ ಕೆಳಕ್ಕೆ ಬೀಳುತ್ತದೆ. ಈ ಘಟನೆ ಯಾವ ದೇವಸ್ಥಾನದಲ್ಲಿ ನಡೆಯಿತು, ಯಾವ ದೇವರು ಎಂಬ ಬಗ್ಗೆ ಮಾಹಿತಿ ಇಲ್ಲ. ಒಟ್ಟಿನಲ್ಲಿ ಇದನ್ನು ನೋಡಿ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿದ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ಸಿಗುವುದಂತು ಸತ್ಯ.

Love: ಗೆಳೆಯನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್‌ಗೆ ಹಾಕಿದ ಪ್ರಿಯತಮೆ; ಕಾರಣ ಕೇಳಿ ಶಾಕ್‌ ಆದ ಪೊಲೀಸರು

You may also like

Leave a Comment