Home » Dasara: ದಸರಾ ಆನೆಗಳ ದುರ್ಬಳಕೆ: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಆನೆಗಳ ಕಾದಾಟಕ್ಕೆ ಕಾರಣ

Dasara: ದಸರಾ ಆನೆಗಳ ದುರ್ಬಳಕೆ: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಆನೆಗಳ ಕಾದಾಟಕ್ಕೆ ಕಾರಣ

0 comments

Dasara elephant: ದಸರಾ ಆನೆಗಳನ್ನು (Dasara elephant) ಮನೋಸೋ ಇಚ್ಛೆ ನಡೆಸಿಕೊಳ್ಳುವುದು, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಎಂದು ತೋರ್ಪಡಿಸುತ್ತಿದೆ ಎಂಬ ಸುದ್ದಿ ಆಗಿದೆ. ಹೌದು, ದಸರಾ ಗಜಪಡೆಯನ್ನು ಮೈಸೂರಲ್ಲಿ ತಮ್ಮ ರೀಲ್ಸ್ ಶೋಕಿಗೆ ಬಳಸಲು ಆರಂಭಿಸಿದ್ದು, ಈಗಾಗಲೇ ಮೈಸೂರಿನ ಅರಮನೆ ಆವರಣಕ್ಕೆ ಪ್ರತಿದಿನವೂ ಹಲವು ಅಪರಿಚಿತರು ಬಂದು ಫೋಟೋ ಶೂಟ್ ರೀಲ್ಸ್ ನೆಪದಲ್ಲಿ ಆನೆ ಸೊಂಡಿಲು, ದಂತಗಳ ಮೇಲೆ ನೇತಾಡಿ ಎಳೆದು ಕ್ಯಾಮರಾ ಮುಂದೆ ಅತಿರೇಖವಾಗಿ ವರ್ತಿಸುತ್ತಿದ್ದಾರೆ.

ಸಾಮಾನ್ಯವಾಗಿ ಪ್ರಾಣಿಗಳು ಬಹಳ ಸೂಕ್ಷ್ಮ ಸ್ವಭಾವದಿಂದ ಕೂಡಿರುತ್ತದೆ. ಅವುಗಳು ಹೆಚ್ಚು ಪ್ರಶಾಂತತೆಯನ್ನು ಬಯಸುತ್ತದೆ. ಹಾಗಿರುವಾಗ ಆನೆಗಳ ಮುಂದೆ ಫೋಟೊಶೂಟ್‌ಗಾಗಿ ಅರಣ್ಯ ಅಧಿಕಾರಿಗಳು ಅನುಮತಿ ನೀಡುವುದು ಸರಿಯಲ್ಲ. ಈಗಾಗಲೇ ಅರಣ್ಯ ಅಧಿಕಾರಿಗಳ ನಿರ್ಲಕ್ಷ ದಿಂದ ಮೊನ್ನೆಯಷ್ಟೆ ಎರಡು ಆನೆಗಳ ನಡುವೆ ಕಾಳಗ ನಡೆದು ಪರಿಸ್ಥಿತಿ ಹದಗೆಟ್ಟಿದೆ.

ಇದೀಗ ರೀಲ್ಸ್ ಶೋಕಿಗೆ ದಸರಾ ಆನೆಗಳ ಬಳಕೆ ಹೆಚ್ಚಾಗಿದೆ. ಈ‌ ಹಿಂದೆ ಕೂಡ ಆನೆ ಮುಂದೆ ಫೋಟೋ ತೆಗೆದಿದ್ದರಿಂದ ಹಲವು ಅವಾಂತರ ಆಗಿರುವ ಉದಾಹರಣೆ ಇದೆ. ಅದಲ್ಲದೆ ಈ ಫೋಟೋ ಶೂಟ್ ರೀಲ್ಸ್ ನೆಪದಲ್ಲಿ ಅರಣ್ಯ ಅಧಿಕಾರಿಗಳು ಹಣವನ್ನು ಮಾಡುತ್ತಿದ್ದಾರೆ ಎಂಬ ಅಪವಾದವು ಕೇಳಿಬರುತ್ತಿದೆ. ಈ ಎಲ್ಲಾ ಕಾರಣದಿಂದ ಇನ್ನಾದರೂ ಅರಣ್ಯ ಅಧಿಕಾರಿಗಳು ಎಚ್ಚತ್ತುಕೊಳ್ಳುವುದು ಉತ್ತಮ.

You may also like

Leave a Comment