Home » ದಸರಾಕ್ಕೆ ಪತಿ ಮನೆಗೆ ಬರಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ದಸರಾಕ್ಕೆ ಪತಿ ಮನೆಗೆ ಬರಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ

by Praveen Chennavara
0 comments

ತೆಲಂಗಾಣ : ದಸರಾ ಹಬ್ಬಕ್ಕೆ ಪತಿಯು ಮನೆಗೆ ಬಂದಿಲ್ಲವೆಂದು ಮನನೊಂದು ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ಅಮಂಗಲ್ಲು ಮೆಡಿಗಡ್ಡದಲ್ಲಿ ನಡೆದಿದೆ.

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಮಂಗಲ್ಲು ಮೆಡಿಗಡ್ಡ ನಿವಾಸಿ ಅನಿಲ್ ಎಂಬವರ ಪತ್ನಿ ವಿದ್ಯಾವತ್ ಮೌನಿಕಾ( 20) ಎಂಬವರು ಆತ್ಮಹತ್ಯೆಗೆ ಶರಣಾದ ಯುವತಿ.

ವಿದ್ಯಾವತ್ ಮೌನಿಕಾ ತಮ್ಮ ಮಾವನ ಮಗನಾದ ಅನಿಲ್ ಎಂಬವರನ್ನು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಅನಿಲ್ ಹಾಗೂ ವಿದ್ಯಾವತ್ ಮೌನಿಕಾ ಒಂದೇ ಗ್ರಾಮದವರೂ ಆಗಿದ್ದಾರೆ.

You may also like

Leave a Comment