8
Dasara Issue: ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಬಾನು ಮುಸ್ತಾಕ್ ಚಾಮುಂಡುಬೆಟ್ಟ ಹತ್ತುವಂತಿಲ್ಲ ಎಂದಿದ್ದು, ಈ ಹೇಳಿಕೆಗೆ ಡಿ.ಸಿ.ಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಚಾಮುಂಡಿಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ. ಎಲ್ಲಾ ಸಮುದಾಯದವರೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ ಎಂದಿದ್ದಾರೆ. ಹಿಂದೂಗಳು ಮಸೀದಿ, ಚರ್ಚ್, ಗುರುದ್ವಾರಕ್ಕೆ ಹೋಗುತ್ತಾರೆ. ರಾಮಮಂದಿರಕ್ಕೆ ಹಿಂದೂಗಳಷ್ಟೇ ಬರಬೇಕು ಎಂದು ಯಾಕೆ ಬೋರ್ಡ್ ಹಾಕಿಲ್ಲ. ದಸರಾ ಸಾಂಸ್ಕೃತಿಕ ಆಚರಣೆ, ಧಾರ್ಮಿಕ ಆಚರಣೆಯ್ಲ ಎಂದು ತಿಳಿಸಿದ್ದಾರೆ.
