Kadaba: ಅ.20 ರಂದು ಕಣ್ಣೂರಿನಲ್ಲಿ ಬೆಳ್ಳಂಬೆಳಗ್ಗೆ ರೈಲಿನಿಂದ ಕಡಬದ ಯುವಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.
ಸುರೇಶ್ (34) ಎಂಬುವವರೇ ಮೃತಪಟ್ಟ ಯುವಕ. ಇವರು ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ.
ಚೌತಿ ಹಬ್ಬದ ಹಿನ್ನೆಲೆ ವಾರದ ಹಿಂದೆ ಊರಿಗೆ ಬಂದು ಮತ್ತೆ ಕೆಲಸಕ್ಕೆ ಹೋಗಿದ್ದರು. ಇವರು ಕೇರಳದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದು, ಗುರುವಾರ ರಾತ್ರಿ ಕರೆ ಮಾಡಿ ರೈಲಿನಲ್ಲಿ ಬರುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಆದರೆ ಇಂದು ಮುಂಜಾನೆ 8 ಗಂಟೆಗೆ ಅವರ ಮೊಬೈಲ್‌ಗೆ ಮನೆ ಮಂದಿ ಕರೆ ಮಾಡಿದಾಗ ಆಸ್ಪತ್ರೆಯೊಂದರ ಸಿಬ್ಬಂದಿ ಫೋನ್ ಕರೆ ಸ್ವೀಕರಿಸಿದ್ದು, ಈ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರನ್ನು ಅಗಲಿದ್ದು, ಮನೆ ಮಂದಿ ಭೀಮ್ ಆರ್ಮಿ ಸಂಘಟನೆಯ ಸಹಕಾರದೊಂದಿಗೆ ಕಣ್ಣೂರಿಗೆ ಹೋಗಿರುವುದಾಗಿ ತಿಳಿದು ಬಂದಿದೆ.
ಇನ್ನು ಓದಿ: Senior Citizens: ವಿಶೇಷವಾದ FD ಆರಂಭಿಸಿದೆ ಈ ಬ್ಯಾಂಕ್ – ಈ ವರ್ಗದ ಜನರಿಗಂತೂ ಹೊಡೀತು ಬಂಪರ್ ಲಾಟ್ರಿ
