Home » IPL-2026 ಹರಾಜಿಗೆ ಡೇಟ್ ಫಿಕ್ಸ್ !!

IPL-2026 ಹರಾಜಿಗೆ ಡೇಟ್ ಫಿಕ್ಸ್ !!

0 comments

IPL-2026: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ತಯಾರಿಗಳು ಆರಂಭವಾಗಿದ್ದು, ಮುಂಬರುವ ಐಪಿಎಲ್ ಹರಾಜಿನ ಕುರಿತಂತೆ ಮಹತ್ವದ ಅಪ್‌ಡೇಟ್ ಬಹಿರಂಗವಾಗಿದೆ.

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ 2026ರ ಸಿದ್ಧತೆಗಳು ಭರದಿಂದ ಸಾಗಿವೆ. ಇನ್ನು 19ನೇ ಆವೃತ್ತಿಯ ಐಪಿಎಲ್‌ಗೆ ಇನ್ನು ತಿಂಗಳುಗಳೇ ಬಾಕಿ ಇದೆ. ಇದಕ್ಕೂ ಮೊದಲು ಐಪಿಎಲ್‌ ಹರಾಜು ಪ್ರಕ್ರಿಯೆ ನಡೆಯಲಿದೆ. 2026ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 13-15 ರ ನಡುವೆ ನಡೆಯುವ ಸಾಧ್ಯತೆ ಇದೆ. ಫ್ರಾಂಚೈಸಿಗಳಿಗೆ ಆಟಗಾರರನ್ನು ಉಳಿಸಿಕೊಳ್ಳಲು, ಬಿಡುಗಡೆ ಮಾಡಲು ನವೆಂಬರ್ 15 ಕೊನೇ ದಿನಾಂಕ ಆಗಿದೆ. ಹರಾಜು ಈ ಬಾರಿ ಭಾರತದಲ್ಲಿಯೇ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ;Bigg Boss Kannada: ಬರೋಬ್ಬರಿ 6 ಗಂಟೆ ಸ್ನಾನ ಮಾಡಿದ ಸತೀಶ್ !! ರೊಚ್ಚಿಗೆದ್ದ ಬಿಗ್ ಬಾಸ್ ಮನೆ ಮಂದಿ

ಕಳೆದ ಎರಡು ಐಪಿಎಲ್‌ ಹರಾಜುಗಳು ದೇಶದ ಹೊರಗಡೆ ನಡೆದಿತ್ತು. ಆದರೆ ಈ ಬಾರಿ ಎಲ್ಲಿ ನಡೆಯುತ್ತದೆ ಎಂಬ ಬಗ್ಗೆ ಇನ್ನು ಯಾವುದೇ ಸ್ಪಷ್ಟ ಉತ್ತರವಿಲ್ಲ. ಈ ಬಾರಿ ಮಿನಿ ಹರಾಜು ಭಾರತದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಾರಿ ಹರಾಜನ್ನು ಬೆಂಗಳೂರು ಅಥವಾ ಕೋಲ್ಕತ್ತಾದಲ್ಲಿ ನಡೆಸುವ ಸಾಧ್ಯತೆ ಇದೆ. ಈ ಎರಡು ನಗರಗಳನ್ನು ಬಿಟ್ಟು ಬೇರೆ ನಗರಗಳಲ್ಲೂ ಈ ಹರಾಜು ನಡೆದರೆ ಅಚ್ಚರಿಯಿಲ್ಲ.

You may also like