NEET : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2025 ನೇ ಸಾಲಿನ NEET UG ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಮೇ 1ರಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ. http://neet.nta.nic.in ನಿಂದ ಡೌನ್‌ಲೋಡ್ ಮಾಡಬಹುದಾಗಿದೆ.
ಮೇ 4ರಂದು ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ ಹಾಜರಾಗಲು ಪ್ರವೇಶಪತ್ರ ಕಡ್ಡಾಯ. ಪ್ರವೇಶ ಪತ್ರದಲ್ಲಿ ಪರೀಕ್ಷಾ ಕೇಂದ್ರದ ವಿಳಾಸ, ರೋಲ್ ನಂಬರ್, ಪರೀಕ್ಷಾ ಸಮಯ ಮುಂತಾದ ಪ್ರಮುಖ ಮಾಹಿತಿ ಇರಲಿದೆ. ಪರೀಕ್ಷಾ ಕೇಂದ್ರಗಳ ಬಗೆಗಿನ ಮಾಹಿತಿ ಏ.26ಕ್ಕೆ ಬಿಡುಗಡೆಯಾಗಲಿದೆ.
ಪರೀಕ್ಷೆಯ ದಿನದಂದು, ವಿದ್ಯಾರ್ಥಿಗಳು ತಮ್ಮಮುದ್ರಿತ ಪ್ರವೇಶ ಪತ್ರ, ಮಾನ್ಯವಾದ ಫೋಟೋ ಐಡಿ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿ), ಮತ್ತು ಪಾಸ್‌ಪೋರ್ಟ್ ಮತ್ತು ಪೋಸ್ಟ್‌ಕಾರ್ಡ್ ಗಾತ್ರದ ಛಾಯಾಚಿತ್ರಗಳನ್ನು ತೆಗೆದುಕೊಂಡು ಹೋಗಬೇಕು. ಇದು ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್‌ಲೋಡ್ ಮಾಡಿದ ಅದೇ ಫೋಟೋ ಆಗಿರಬೇಕು ಎಂದು ತಿಳಿಸಿದೆ.
