Home » ಮಗಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಮಗಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

by Praveen Chennavara
0 comments

ಮೈಸೂರು : ತಾಯಿ ತನ್ನ ಮಗುವಿನ ಜತೆ ಮಂಡ್ಯದ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಬಳಿ ಕಾವೇರಿನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರಿನ ಹೂಟಗಳ್ಳಿ ನಿವಾಸಿ ಪ್ರದೀಪ್‌ಕುಮಾರ್ ಪತ್ನಿ ಭಾರ್ಗವಿ(31) ಹಾಗೂ ಮಗಳು ದೀಕ್ಷಾ(3) ಆತ್ಮಹತ್ಯೆ ಮಾಡಿಕೊಂಡವರು.

ಶುಕ್ರವಾರ ಸಂಜೆ ಭಾರ್ಗವಿ ಮಗುವಿನೊಂದಿಗೆ ನದಿಗೆ ಹಾರಿದ್ದು, ಶನಿವಾರ ಬೆಳಗ್ಗೆ ಮೃತದೇಹಗಳು ಪತ್ತೆಯಾಗಿವೆ.

ಶ್ರೀರಂಗಪಟ್ಟಣ ತಾಲೂಕು ದೇವೇಗೌಡನಕೊಪ್ಪಲು ಗ್ರಾಮದ ಭಾರ್ಗವಿ ಅವರನ್ನು ಪಾಂಡವಪುರ ತಾಲೂಕು ಲಕ್ಷ್ಮೀಸಾಗರ ಗ್ರಾಮದ ಪ್ರದೀಪ್‌ಕುಮಾರ್‌ಗೆ 5 ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಇವರ ಕುಟುಂಬ ಮೈಸೂರಿನ ಹೂಟಗಳ್ಳಿಯಲ್ಲಿ ವಾಸವಾಗಿತ್ತು.

ಘಟನೆ ಕುರಿತು ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

You may also like

Leave a Comment