Home » ಮಗಳ ಸಾವಿನಿಂದ ನೊಂದ ತಂದೆ ಅಳಿಯನ ಮನೆಮುಂದೆಯೇ ಆತ್ಮಹತ್ಯೆ

ಮಗಳ ಸಾವಿನಿಂದ ನೊಂದ ತಂದೆ ಅಳಿಯನ ಮನೆಮುಂದೆಯೇ ಆತ್ಮಹತ್ಯೆ

by Praveen Chennavara
0 comments

ಮಗಳ ಸಾವಿನಿಂದ ಮನನೊಂದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಿಂದ ವರದಿಯಾಗಿದೆ.

ಬೇಲೂರು ತಾಲೂಕಿನ ಮಾಳೆಗೆರೆ ಎಂಬಲ್ಲಿ ಮಗಳ ಪತಿಯ ಮನೆ ಮುಂದೆಯೇ ನಾಗರಾಜ್ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗಳ ಪತಿಯ ಮನೆಯವರ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಮಗಳು ಗರ್ಭಿಣಿಯಾದ ವೇಳೆ ಮಗಳ ಗರ್ಭಪಾತಕ್ಕೆ ಯತ್ನಿಸಲಾಗಿದೆ ಎಂದು ಮೃತ ನಾಗರಾಜ್ ಕುಟುಂಬ ಆರೋಪಿಸಿದೆ. ಮಗಳಿಗೆ ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ವೇಳೆಯಲ್ಲಿ ಮೃತಪಟ್ಟಿದ್ದಾಳೆ ಎಂದು ದೂರು ನೀಡಲಾಗಿದೆ.

ಪ್ರೀತಿಯ ಮಗಳ ಸಾವಿನಿಂದ ಮಾನಸಿಕವಾಗಿ ಜರ್ಜರಿತನಾಗಿ ತಂದೆ ಆತ್ಮಹತ್ಯೆ ನಿರ್ಧಾರ ಮಾಡಿಕೊಂಡು ತಾನು ತಂದಿದ್ದ ಪೂಜಾ ಸಾಮಗ್ರಿಗಳನ್ನು, ತಿಂಡಿ ತಿನಿಸುಗಳನ್ನು ಮನೆ ಬಾಗಿಲಿಗೆ ಇಟ್ಟು ಪೂಜೆ ಸಲ್ಲಿಸಿ ನಂತರ ತನ್ನ ಮೊಬೈಲ್ ನಲ್ಲಿ ತನ್ನ ಮಗಳಿಗಾದ ನೋವನ್ನು ಪೋನ್ ನಲ್ಲಿ ವೀಡಿಯೋ ರೆಕಾರ್ಡ್ ಮಾಡಿ ನನ್ನ ಮಗಳ ಸಾವಿಗೆ ನೇರ ಕಾರಣರಾದ ಆಕೆಯ ಅತ್ತೆ ಭದ್ರಮ್ಮ ಹಾಗೂ ಆಕೆಯ ಗಂಡ ಪ್ರವೀಣ್ ಹಾಗೂ ಆಂದಲೆ ಸೊಮಣ್ಣ ಎಂಬವರೇ ನೇರ ಕಾರಣ ಎಂದು ಬೇಸರ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ನನಗೆ ಬಂದಿರುವ ಸ್ಥಿತಿ ಬೇರೆ ಯಾವ ತಂದೆ ತಾಯಿಗೂ ಬರಬಾರದು ತಪ್ಪಿತಸ್ಥರನ್ನು ಸಾಯುವವರೆಗೂ ಜೈಲಿನಲ್ಲಿ ಇಡಬೇಕು ಎಂದು ಪೋಲಿಸರಲ್ಲಿ ಮನವಿ ಮಾಡಿ ಅಳಿಯನ ಮನೆ ಮುಂದೆ ಬಾಗಿಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಸಿಪಿಐ ಶ್ರೀಕಾಂತ್, ಅರೇ ಹಳ್ಳಿ ಸುರೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment