Home » Mysore: ಪ್ರಿಯಕನೊಂದಿಗೆ ಮಗಳು ಪರಾರಿ – ಮನನೊಂದು ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ!!

Mysore: ಪ್ರಿಯಕನೊಂದಿಗೆ ಮಗಳು ಪರಾರಿ – ಮನನೊಂದು ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ!!

0 comments

Mysore : ಮಗಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಮಗಳು ಹೋದಳೆಂದು ಮನನೊಂದು ಒಂದೇ ಕುಟುಂಬದ ಮೂವರು ಸಾಮೂಹಿಕವಾಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

 

ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಈಗ ಹೊರ ದುರಂತ ನಡೆದಿದ್ದು, ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವವರು. ಶನಿವಾರ ಮುಂಜಾನೆ ಜಲಾಶಯಕ್ಕೆ ಆಗಮಿಸಿದ ಮೂವರೂ ಡೆತ್‌ ನೋಟ್‌ ಬರೆದು, ದಡದಲ್ಲಿ ಬೈಕ್‌ ನಿಲ್ಲಿಸಿ, ನೀರಿಗೆ ಹಾರಿದ್ದಾರೆ.

 

ಗ್ರಾಮಸ್ಥರು ಆ ಮಾರ್ಗವಾಗಿ ಸಂಚರಿಸುವಾಗ ಬೈಕ್ ನಿಲ್ಲಿಸಿರುವುದನ್ನು ಗಮನಿಸಿ, ಚಪ್ಪಲಿಗಳೂ ದಡದಲ್ಲಿ ಬಿಟ್ಟಿರುವುದನ್ನು ನೋಡಿ ಪರಿಶೀಲಿಸಿದಾಗ ಬೈಕ್‌ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ನಂತರ ಅವರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು

 

ಮೃತ ಮಹದೇವಸ್ವಾಮಿಯ ಹಿರಿಯ ಪುತ್ರಿ ಅರ್ಪಿತಾ ಮನೆಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಡೆತ್‌ ನೋಟ್‌ ಪರಿಶೀಲನೆ ಮಾಡಿದ ಬಳಿಕ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದರು.

You may also like