Home » Mangalore: ಮಗಳ ವೀಡಿಯೋ ಅಶ್ಲೀಲವಾಗಿ ಎಡಿಟ್‌ ಮಾಡಿ ವೈರಲ್‌; ತಂದೆ ಮೇಲೆ ಬಿತ್ತು ಕೇಸು

Mangalore: ಮಗಳ ವೀಡಿಯೋ ಅಶ್ಲೀಲವಾಗಿ ಎಡಿಟ್‌ ಮಾಡಿ ವೈರಲ್‌; ತಂದೆ ಮೇಲೆ ಬಿತ್ತು ಕೇಸು

0 comments
Crime

Mangalore: ತನ್ನ ಮಗಳ  ವೀಡಿಯೋಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ತಂದೆಯೋರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪವೊಂದು ಬೆಳಕಿಗೆ ಬಂದಿದೆ. ತನ್ನ ಮಗಳ ವೀಡಿಯೋಗಳನ್ನು  ಪ್ರಿಯಕರನ ಜೊತೆ ಅಶ್ಲೀಲ ರೀತಿಯಲ್ಲಿ ಎಡಿಟ್‌ ಮಾಡಿ  ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಹೊತ್ತಿರುವ ತಂದೆ ಆಸೀಫ್‌ ಯಾನೆ ಆಸೀಫ್‌ ಆಪದ್ಭಾಂದವನ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿರುವ ಕುರಿತು ವರದಿಯಾಗಿದೆ.

ಆರೋಪಿ ಪುತ್ರಿಯು ಫಿನಾಯಿಲ್‌ ಕುಡಿದು ಈ ಸಂದರ್ಭದಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಂಚಿನಡ್ಕದ ನಿವಾಸಿ ಆರೋಪಿ ಆಸೀಫ್‌ನ ಮಗಳು ಹಾಗೂ ತೀರ್ಥಹಳ್ಳಿಯ ಅವರ ಸಂಬಂಧಿ ತೌಸೀಫ್‌ ಪ್ರೀತಿ ಮಾಡುತ್ತಿದ್ದು, ಇದು ಆಸೀಫ್‌ಗೆ ಇಷ್ಟವಿರಲಿಲ್ಲ. ಹೀಗಾಗಿ ತೌಸೀಫ್‌ನನ್ನು ಮನೆಗೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ ಆರೋಪಿ. ನಂತರ ತನ್ನ ಮಗಳ ಹಾಗೂ ಆ ಹುಡುಗನ ಫೋನ್‌ ಕಸಿದು ಅದರಲ್ಲಿರುವ ವೀಡಿಯೋಗಳನ್ನು ತನ್ನ ಫೋನ್‌ಗೆ ವರ್ಗಾಯಿಸಿಕೊಂಡಿದ್ದು, ಅಶ್ಲೀಲವಾಗಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಿವಿಧ ವಾಟ್ಸಪ್‌ ಗುಂಪುಗಳಿಗೆ ರವಾನೆ ಮಾಡಿದ್ದಾನೆ.

ಇದರಿಂದ ಈತನ ಪತ್ನಿ ಕೋಪಗೊಂಡಿದ್ದು, ಇದನ್ನು ಆಕ್ಷೇಪಿಸಿದ್ದಾಳೆ. ಈ ಸಂದರ್ಭದಲ್ಲಿ ಆಕೆಗೆ ಮತ್ತು ಪುತ್ರಿಗೂ ಹಲ್ಲೆ ಮಾಡಿದ್ದಾನೆ. ಇದೀಗ ಈ ಕುರಿತಾಗಿ ಪತ್ನಿ ಉಡುಪಿ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಇದಾದ ಬಳಿಕ ಪತ್ನಿಯು ತನ್ನ ತವರು ಮನೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಯೂ ಹೋಗಿ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Chaddi Gang: ಮಂಗಳೂರು: ಬಿಜೈನಲ್ಲಿ ಮನೆ ಬಾಗಿಲು ಒಡೆದು ಕಳ್ಳತನ; ಚಡ್ಡಿಗ್ಯಾಂಗ್‌ನಿಂದಲೇ ನಡೆಯಿತೇ ಈ ಕೃತ್ಯ?

You may also like

Leave a Comment