3
Belthangady: ಬಂದಾರಿನಲ್ಲಿ ಮನೆಯಿಂದ ಪೇಟೆಗೆಂದು ಹೋದ ವ್ಯಕ್ತಿಯ ಮೃತದೇಹ ಪದ್ಮುಂಜ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತ ವ್ಯಕ್ತಿ ಬಂದಾರು ಗ್ರಾಮದ ನೂಜಿ ಮನೆ ನಿವಾಸಿ ಚೆನ್ನಪ್ಪ ಪರವ (58) ಎಂಬವರಾಗಿದ್ದಾರೆ.
ಮಾ.11ರಂದು ಚೆನ್ನಪ್ಪ ಪರವ ಉಪ್ಪಿನಂಗಡಿ ಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಅವರು ಮನೆಗೆ ಹಿಂತಿರುಗಿರಲಿಲ್ಲ. ಮಾ.12 ರಂದು ಅವರು ಪದ್ಮುಂಜ ಬಸ್ ನಿಲ್ದಾಣದಲ್ಲಿ ಬಿದ್ದುಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು, ಅಲ್ಲಿಗೆ ತೆರಳಿ ನೋಡಿದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
