Home » ಮಂಗಳೂರು: ಸಮುದ್ರದಲ್ಲಿ ತೇಲಿ ಬಂತು ಯುವತಿಯ ಶವ

ಮಂಗಳೂರು: ಸಮುದ್ರದಲ್ಲಿ ತೇಲಿ ಬಂತು ಯುವತಿಯ ಶವ

by Praveen Chennavara
0 comments

ಮಂಗಳೂರು: ನಗರದ ಹೊಯ್ಯಬಜಾರ್‌ನ ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ರವಿವಾರ ಬೆಳಗ್ಗೆ ಪತ್ತೆಯಾಗಿದೆ.

ದಕ್ಕೆಗೆ ತೆರಳುತ್ತಿದ್ದ ಸ್ಥಳೀಯ ಮೀನುಗಾರರು ಸಮುದ್ರದ ದಡದಲ್ಲಿ ಯುವತಿಯ ಮೃತ ದೇಹ ನೋಡಿದ್ದಾರೆ. ಕೂಡಲೇ ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಸರಕಾರಿ ಜಿಲ್ಲಾಸ್ಪತ್ರೆ ವೆಬ್ಲಾಕ್‌ನ ಶವಾಗಾರಕ್ಕೆ ತಂದಿದ್ದಾರೆ.

ಚಹರೆ: ಸುಮಾರು 5 ಅಡಿ ಎತ್ತರ, ಕಪ್ಪು ಬಣ್ಣದ ಟೀಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಒಂದು ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆ ಹಾಕಿಕೊಂಡಿದ್ದು, ಉದ್ದ ಕೂಡಲು ಹೊಂದಿದ್ದಾರೆ. ಮೃತದೇಹದ ಮೇಲೆ ಯಾವುದೇ ಗಾಯಗೊಂಡ ಕಲೆಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment