4
Thiruvananthapuram: ರೈಲು ಹಳಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪತ್ತನಂತಿಟ್ಟದ ಅತಿರುಂಕಳ್‌ನ ನಿವಾಸಿ ಮೇಘಾ ಮಧುಸೂಧನನ್ (25) ಎಂದು ಗುರುತಿಸಲಾಗಿದ್ದು ಇವರು ವಿಧಿ ವಿಜ್ಞಾನದ ಪದವೀಧರೆಯಾಗಿ ತಿರುವನಂತಪುರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಬೇಹುಗಾರಿಕೆ ಬ್ಯೂರೊ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ತಿರುವನಂತಪುರಕ್ಕೆ ಸ್ಥಳಾಂತರಗೊಂಡಿದ್ದರು.
”ಪ್ರಾಥಮಿಕ ತನಿಖೆ ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದೆ. ಆದರೆ, ನಮಗೆ ಸುಸೈಡ್ ನೋಟ್ ಸಿಕ್ಕಿಲ್ಲ. ಮುಂದಿನ ತನಿಖೆ ನಡೆಯುತ್ತಿದೆ” ಎಂದು ಪೆಟ್ಟಾಹ್ ಸಿಐ ಪ್ರೇಮ್ ಕುಮಾರ್ ತಿಳಿಸಿದ್ದಾರೆ.
