Home » Death: ಬಾಯಲ್ಲಿ ಮೀನು ಹಿಡಿಯಲು ಹೋಗಿ ಗಂಟಲಲ್ಲಿ ಸಿಲುಕಿ ಯುವಕ ಸಾವು!

Death: ಬಾಯಲ್ಲಿ ಮೀನು ಹಿಡಿಯಲು ಹೋಗಿ ಗಂಟಲಲ್ಲಿ ಸಿಲುಕಿ ಯುವಕ ಸಾವು!

by ಕಾವ್ಯ ವಾಣಿ
0 comments

Death: ಯುವಕನೊಬ್ಬ ಭತ್ತದ ಗದ್ದೆಯಲ್ಲಿ ಮೀನು ಹಿಡಿಯಲು ಹೋಗಿ ಗಂಟಲಲ್ಲಿಮೀನು ಸಿಲುಕಿ ಮೃತಪಟ್ಟ (Death) ಘಟನೆ ಅಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ಭಾನುವಾರ ನಡೆದಿದೆ.

ಮೃತನನ್ನು ಪುತ್ತುಪ್ಪಳ್ಳಿಯ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ. ಸಂಜೆ ಸಮಯ ತಮ್ಮ ಸ್ನೇಹಿತರೊಂದಿಗೆ ಭತ್ತದ ಗದ್ದೆಯ ನೀರಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಅವನು ತನ್ನ ಬಾಯಿಯಲ್ಲಿ ಮೀನನ್ನು ಕಚ್ಚಿಕೊಂಡು ಮತ್ತೊಂದು ಮೀನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಅದು ಅವನ ಗಂಟಲಿಗೆ ಇಳಿದು ಉಸಿರಾಟ ತೊಂದರೆ ಆಗಿದೆ. ಯುವಕನನ್ನು ತಕ್ಷಣ ಓಚಿರಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಷ್ಟರಲ್ಲೇ ಆತ ಮೃತ ಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. 

 

You may also like